ಚಿಕ್ಕಬಳ್ಳಾಪುರ : ರಾಜ್ಯದೆಲ್ಲೆಡೆ ಈಗ ವಕ್ಫ್ ಆಸ್ತಿ ಕಬಳಿಕೆ ಸದ್ದು ಹೆಚ್ಚಾಗಿದ್ದು. ಪ್ರತಿ ಜಿಲ್ಲೆಯಲ್ಲಿಯು ವಕ್ಫ್ ರೈತರ ಜಮೀನು, ಸ್ಮಶಾನ, ದೇವಸ್ಥಾನ ಸೇರಿದಂತೆ ಹಲವಾರು ಆಸ್ತಿಯನ್ನು ಕಬಳಿಸುತ್ತಿದೆ. ಅದೇ ರೀತಿಯಾಗಿ ಇದೀಗ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಓದಿದ ಶಾಲೆಗೂ ವಕ್ಫ ಮಂಡಳಿ ಕನ್ನ ಹಾಕಿದೆ.
ಸರ್ಎಂ. ವಿಶ್ವೇಶ್ವರಯ್ಯ ಆಟವಾಡಿ, ಓದಿದ ಚಿಕ್ಕಬಳ್ಳಾಪುರ ನಗರದ ಕಂದವಾರದಲ್ಲಿರೋ ಸರ್ಕಾರಿ ಶಾಲೆಯನ್ನು ವಕ್ಫ್ ಕಬಳಿಸಿದೆ ಎಂದು ಆರೋಪಿಸಲಾಗಿದ್ದು.ಕಂದವಾರ ಗ್ರಾಮದ ಸರ್ವೇ ನಂ 1 ರಲ್ಲಿ ಇರೋ 19 ಗುಂಟೆ ಜಮೀನಿನ ಪಹಣಿಯಲ್ಲಿ ವಕ್ಫ್ ಎಂದು ನಮೂದಿಸಲಾಗಿದೆ.
ನೂರಾರು ವರ್ಷಗಳಿಂದ ಈ ಜಮೀನಿನ ದಾಖಲೆಯಲ್ಲಿ ಶಾಲೆಯೆಂದು ನಮೂದಿಸಲಾಗಿತ್ತು. ಆದರೆ 2018 ರಿಂದಿಚೆಗೆ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದ್ದು. ದಾವೂದ್ ಷಾ ವಲ್ಲೀ ದರ್ಗಾ ಸುನ್ನಿ ವಕ್ಫ್ ಆಸ್ತಿ ಎಂದು ನಮೂದು ಮಾಡಲಾಗಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದು.ಕೂಡಲೇ ಇದನ್ನು ಸರಿಪಡಿಸಬೇಕು ಇಲ್ಲವಾದಲ್ಲಿ ಉಗ್ರಹೋರಾಟ ಮಾಡುತ್ತೇವೆ ಎಂದು
ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.