ವಾಷಿಂಗ್ಟನ್: ಪ್ರಜಾಪ್ರಭುತ್ವದ ಜನಕನೆಂದು ಕರೆದುಕೊಳ್ಳುವ ಅಮೇರಿಕಾದಲ್ಲಿ ಇಂದು ಚುನಾವಣೆ ನಡೆಯಲಿದ್ದು.ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಪಕ್ಷದ ಡೋನಾಲ್ಡ್ ಟ್ರಂಪ್ ನಡುವೆ ಅಧ್ಯಕ್ಷ ಸ್ಥಾನಕ್ಕೆ ಹಣಾಹಣಿ ನಡೆಯಲಿದೆ.
ಅಮೆರಿಕಾದ 50 ರಾಜ್ಯಗಳಲ್ಲೂ ಇಂದು ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು, ಎಲೆಕ್ಟ್ರೋರಲ್ ಕಾಲೇಜ್ ಸದಸ್ಯರನ್ನು ಆಯ್ಕೆ ಮಾಡಲು ಇಂದು ಮತದಾನ ನಡೆಯಲಿದೆ. ಫಲಿತಾಂಶ ನಿರ್ಧರಿಸುವ ರಾಜ್ಯಗಳಲ್ಲಿ ಡೋನಾಲ್ಡ್ ಟ್ರಂಪ್ ಪರ ಒಲವಿದ್ದು ಡೊನಾಲ್ಡ್ ಟ್ರಂಪ್ ಗೆಲ್ಲುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸುತ್ತಿವೆ.
ಡೋನಾಲ್ಡ್ ಟ್ರಂಪ್ ಸಂಪೂರ್ಣ ಬಲಪಂಥೀಯ ಧೋರಣೆ ಹೊಂದಿರುವ ನಾಯಕನಾಗಿದ್ದು ಆಕ್ರಮ ವಲಸೆ ತಡೆಯಲು ಕಠಿಣ ಕ್ರಮ ಕೈಗೊಳ್ಳುವ ವಾಗ್ದಾನ ನೀಡಿದ್ದಾರೆ. ಅದರ ಜೊತೆಗೆ ಜೋ ಬೈಡೆನ್ ಅವಧಿಯಲ್ಲಿ ಅಮೇರಿಕದ ಆರ್ಥಿಕತೆ ಕುಸಿತ, ನಿರುದ್ಯೋಗ ಹೆಚ್ಚಳ ಮತ್ತು ಹಣದುಬ್ಬರ ಆಗಿದೆ ಎಂದು ಟ್ರಂಪ್ ವಾಗ್ದಾಳಿ ನಡೆಸುತ್ತಿದ್ದಾರೆ.
ಭಾರತೀಯ ಕಾಲಮಾನ ಸಂಜೆ 4 ಗಂಟೆಗೆ ಮತಾದಾನ ಆರಂಭವಾಗಲಿದ್ದು.ನಾಳೆ ಬೆಳಗ್ಗೆ 6:30ರ ತನಕ ಮತದಾನ ನಡೆಯಲಿದೆ. ಈ ಬಾರಿ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿ ಮುಂದಿನ ನಾಲ್ಕು ವರ್ಷಗಳ ಕಾಲ ಅಧಿಕಾರದಲ್ಲಿ ಇರಲಿದ್ದಾರೆ.
60 ವರ್ಷದ ಕಮಲಾ ಹ್ಯಾರಿಸ್ ಮತ್ತು 78 ವರ್ಷದ ಡೊನಾಲ್ಡ್ ಟ್ರಂಪ್ ಇಬ್ಬರಿಗೂ ಹಗ್ಗದ ಮೇಲಿನ ನಡಿಗೆ ಎಂದು ವಿಶ್ಲೇಷಕರು ವಿಶ್ಲೇಷಣೆ ನಡೆಸುತ್ತಿದ್ದು. ನಿರ್ಣಾಯಕ ರಾಜ್ಯಗಳಾದ ಆರಿಜೋನಾ, ಜಾರ್ಜಿಯಾ, ಮಿಶಿಗನ್, ನೆವಾಡಾ, ನಾರ್ತ್ ಕೆರೊಲಿನಾ, ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್‌ನಲ್ಲಿ ಕಮಲಾ ಹ್ಯಾರಿಸ್ ಅವರಿಗಿಂತ ಟ್ರಂಪ್ಗೆ ಹೆಚ್ಚಿನ ಬೆಂಬಲ ಗಿಟ್ಟಿಸಿಕೊಂಡಿದ್ದಾರೆ.