ರಾಮನಗರ : ಚನ್ನಪಟ್ಟಣ ಉಪಚುನಾವಣೆ ದಿನದಿಂದ ದಿನಕ್ಕೆ ಭಾರೀ ಕುತೂಹಲ ಕೆರಳಿಸುತ್ತಿದ್ದು. ಇಂದು ಸಿ.ಪಿ ಯೋಗೇಶ್ವರ್ ಪರವಾಗಿ ಪ್ರಚಾರ ಮಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಕೇಂದ್ರ ಸಚಿವ ಕುಮಾರ್ಸ್ವಾಮಿ ಮೇಲೆ ವಾಗ್ದಾಳಿ ನಡೆಸಿದರು.
ಪ್ರಚಾರದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್ ನಿಮ್ಮ ಮೇಲೆ ಅಪಾರವಾದ ನಂಬಿಕೆ ಇಟ್ಟು ಇಲ್ಲಿಗೆ ಬಂದಿದ್ದೇನೆ.ದೇವರು ವರನೂ ಕೊಡೊಲ್ಲ ಶಾಪವು ಕೊಡೊಲ್ಲ.ಅವಕಾಶ ಕೊಡ್ತಾನೆ ಅದನ್ನು ನೀವು ಬಳಸಿಕೊಳ್ಳಬೇಕು ಅಷ್ಟೇ. ಯೋಗೆಶ್ವರ್ ಅವರು ನಾಲ್ಕು ಬಾರಿ ಶಾಸಕರಾದವರು. ಕುಮಾರಸ್ವಾಮಿಯನ್ನ ಎರಡು ಬಾರಿ ಶಾಸಕರನ್ನಾಗಿ ಮಾಡಿದ್ರಿ. ಕುಮಾರಸ್ವಾಮಿ ಪಕ್ಕದ ರಾಮನಗರ ಕ್ಷೇತ್ರದಲ್ಲಿ ಶಾಸಕರಾಗಿ ಸಿಎಂ ಆಗಿದ್ದರು. ಕುಮಾರಸ್ವಾಮಿಯವರನ್ನು ಎರಡು ಬಾರಿ ಶಾಸಕರನ್ನಾಗಿ ಮಾಡಿದಿರಿ ಎಷ್ಟು ಬಾರಿ ನಿಮ್ಮ ಕ್ಷೇತ್ರಕ್ಕೆ ಬಂದಿದ್ದಾರೆ ಹೇಳಿ ಎಂದು ಕುಮಾರಸ್ವಾಮಿ ವಿರುಧ್ದ ವಾಗ್ದಾಳಿ ನಡೆಸಿದರು.
ಮುಂದುವರಿದು ಮಾತನಾಡಿದ ಡಿಸಿಎಂ, ಪಾರ್ಲಿಮೆಂಟ್ ಚುನಾವಣೆ ಆದಮೇಲೆ ತಾಲ್ಲೂಕಿಗೆ ಬಂದು ನಿಮ್ಮ ಸಮಸ್ಯೆ ಏನು ಅಂತಾ ಕುಮಾರಸ್ವಾಮಿ ಎಂದು ಕೇಳಿಲ್ಲ. ನನ್ನ ಬಳಿಗೆ ಸುಮಾರು 25 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದವು. ಎಲ್ಲವನ್ನೂ ಬಗೆಹರಿಸೋ ಪ್ರಯತ್ನ ಮಾಡಿದ್ದೇನೆ. ಕುಮಾರಸ್ವಾಮಿ ಹಾಗೂ ಅನಿತಕ್ಕ ಇಬ್ಬರೂ ಸೇರಿ ರಾಮನಗರದಲ್ಲಿ ಕೆಲಸ ಮಾಡಿದ್ರೆ. ಯಾಕೆ ಅವರ ಮಗ ನಿಖಿಲ್ ಸೋಲ್ತಾ ಇದ್ರು.? ಎಂದು ರಾಮನಗರದಲ್ಲಿಯು ದೇವೆಗೌಡರ ಕುಟುಂಬದ ಕೊಡುಗೆ ಶೂನ್ಯ ಎನ್ನುವ ಅರ್ಥದಲ್ಲಿ ಮಾತನಾಡಿದರು.
ನಾನು ಚನ್ನಪಟ್ಟಣದ 5 ಸಾವಿರ ಕುಟುಂಬಗಳಿಗೆ ಮನೆ ಕೊಡ್ತಾ ಇದ್ದೇನೆ. ಕುಮಾರಸ್ವಾಮಿಗೆ ಮತ ಕೇಳೊಕೆ ಯಾವ ಹಕ್ಕು ಇಲ್ಲ, ಕುಮಾರಣ್ಣ ನೀವು ಒಂದೇ ಒಂದು ಕೆಲಸ ಮಾಡಿದ್ದೀರಾ..? ಎಂದು ಪ್ರಶ್ನಿಸಿದರು. ಕುಮಾರಸ್ವಾಮಿಯವರೆ ಚನ್ನಪಟ್ಟಣ ಕ್ಷೇತ್ರದ ಜನ ನಿಮ್ಮನ್ನು ಸಿಎಂ ಮಾಡಿದ್ರು.ಈ ಕ್ಷೇತ್ರ ಬಿಟ್ಟು ಮಂಡ್ಯಕ್ಕೆ ಹೋದ್ರಿ. ಇಲ್ಲಿ ರಾಷ್ಟ್ರ ಧ್ವಜ ಹಾರಿಸೋಕು ಬರಲಿಲ್ಲ. ನಿಮಗೆ ಯಾಕೆ ಶಾಸಕಗಿರಿ? ಎಂದು ಹೇಳಿದರು.
ಮಾತೆತ್ತಿದರೆ ಕ್ಷೇತ್ರದ ಜನರೊಂದಿಗೆ ಭಾವನಾತ್ಮಕ ಸಂಭಂದ ಇದೆ ಎನ್ನುತ್ತೀರ, ಆದರೆ ಈ ಕ್ಷೇತ್ರದ ಜನರೊಂದಿಗೆ ನಿಮಗೆ ಯಾವುದೇ ಸಂಬಂಧವಿಲ್ಲ. ನೀವು ಇಲ್ಲಿ ಬಂದು ಮತ ಕೇಳೊ ಅಧಿಕಾರವನ್ನೆ ಕಳೆದುಕೊಂಡಿದ್ದೀರ. ಯೋಗೇಶ್ವರ್ ಕ್ಷೇತ್ರದ ಜನರೊಂದಿಗಿದ್ದಾರೆ. ಕ್ಷೇತ್ರದ ಕೆರೆಗಳನ್ನು ತುಂಬಿಸಿದ್ದಾರೆ. ಅದಕ್ಕೆ ನಾವು ಕರೆದು ಟಿಕೆಟ್ ನೀಡಿದ್ದೇವೆ ಎಂದು ಹೇಳಿದರು.
ನಿಖಿಲ್ನನ್ನು ಕಂದ ಎಂದು ಕರೆದ ಡಿಕೆ.ಶಿವಕುಮಾರ್
ಮೈತ್ರಿ ಅಭ್ಯರ್ಥಿ ನಿಖಿಲ್ಕುಮಾರ್ಸ್ವಾಮಿ ಬಗ್ಗೆ ಮಾತನಾಡಿದ ಡಿ.ಕೆ ಶಿವಕುಮಾರ್. ಆ ಕಂದನ ಬಗ್ಗೆ ನಾನು ಮಾತಾಡೊಲ್ಲ.ಅವನಿಗೆ ಏನು ಗೊತ್ತು, ಏನು ಹೇಳ್ತಾರೋ ಅದನ್ನ ಮಾಡ್ತಾನೆ, ಅಲ್ಲಿ ನಿಂತ್ಕೊ ಅಂದ್ರೆ ನಿಲ್ತಾನೆ, ಇಲಿ ನಿಂತ್ಕೊ ಅಂದ್ರೆ ನಿಲ್ತಾನೆ. ಎಂದು ನಿಖಿಲ್ ಇನ್ನು ರಾಜಕೀಯದಲ್ಲಿ ಶಿಶು ಎಂಬ ರೀತಿಯಲ್ಲಿ ಮಾತನಾಡಿದರು.