ಬೆಂಗಳೂರು : ಕಳೆದೊಂದು ವಾರದಿಂದ ರಾಜ್ಯದಲ್ಲಿ ವಕ್ಫ್ ಜಟಾಪಟಿ ಹೆಚ್ಚಾಗುತ್ತಿದ್ದು. ಕಂಡ ಕಂಡ ಆಸ್ತಿಗಳಿಗಲ್ಲ ವಕ್ಫ್ ಹೆಸರಿರುವುದು ರಾಜ್ಯದಾದ್ಯಂತ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಇದನ್ನು ವಿರೋಧಿಸಿ ಇಂದು ರಾಜ್ಯ ಬಿಜೆಪಿ ಘಟಕ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು. ಬೆಂಗಳೂರಿನಲ್ಲಿಯು ಪ್ರತಿಭಟನೆಯ ಕಾವು ಹೆಚ್ಚಾಗುವ ಸಾಧ್ಯತೆ ಇದೆ.
ಸರ್ಕಾರದ ನಡೆಯನ್ನು ಖಂಡಿಸಿ ರಾಜ್ಯಾದ್ಯಂತ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ಆರಂಭವಾಗಲಿದ್ದು.ಆನೇಕಲ್ ನಲ್ಲಿ ಮಾಜಿ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ, ಕೆಂಗೇರಿ ತಾಲೂಕು ಕಚೇರಿ ಮುಂದೆ ಡಾ.ಅಶ್ವಥ್ ನಾರಾಯಣ್ ನೇತೃತ್ವದಲ್ಲಿ, ಕೆ.ಆರ್.ಪುರಂ & ಕೋಲಾರದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ಆಯೋಜನೆ ಮಾಡಲಾಗಿದೆ.
ಪ್ರತಿ ಜಿಲ್ಲಾ ತಾಲೂಕು ಕಚೇರಿಗಳ ಮುಂದೆ ಬಿಜೆಪಿ ನಾಯಕರ ನೇತೃತ್ವದಲ್ಲಿ ಪ್ರೊಟೆಸ್ ನಡೆಯಲಿದ್ದು.
ವಕ್ಫ್ ಭೂ ಕಬಳಿಕೆ ಆರೋಪದ ವಿರುದ್ಧ ಕಾನೂನು ಹೋರಾಟಕ್ಕೆ ಬಿಜೆಪಿ ಮುಂದಾಗಿದೆ. ರಾಜ್ಯ ಸರ್ಕಾರ ತೆಗೆದುಕೊಂಡಿರುವ ಅವೈಜ್ಞಾನಿಕ ನಿರ್ಧಾರದ ವಿರುದ್ಧ ಸದ್ದಿಲ್ಲದೇ ಕಾನೂನಿನ ಅಸ್ತ್ರ ಹೂಡಲು ಸಿದ್ಧತೆ ನಡೆಸಲಾಗಿದೆ.
ವಕ್ಫ್ ವಿಚಾರಚವಾಗಿ ಬಿಜೆಪಿಯ ಸಂಸದ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದು ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಕಾನೂನು ಹೋರಾಟದ ಜೊತೆಗೆ ಸರಣಿ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಿದ್ದು. ಪ್ರತಿಭಟನೆ, ಜನಾಭಿಪ್ರಾಯ, ಜನಜಾಗೃತಿ, ಸುದ್ದಿಗೋಷ್ಟಿ ಸೇರಿದಂತೆ ಹಲವು ವಿಧದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಟ್ಟಿಹಾಕಲು ಯೋಜನೆ ರೂಪಿಸಲಾಗಿದೆ.
ಇದೇ ನವೆಂಬರ್ 5 ಮತ್ತು 6ನೇ ತಾರೀಖಿನಂದು ವಕ್ಫ್ ವಿಚಾರಕ್ಕೆ ನೇಮಿಸಿರುವ ಜಂಟಿ ಸಂಸದೀಯ ಸಮಿತಿಯ(JPC) ಅಧ್ಯಕ್ಷ ಜಗದಂಬಿಕ ಪಾಲ್ ಕರ್ನಾಟಕಕ್ಕೆ ಭೇಟಿ ನೀಟುವ ಸಾಧ್ಯತೆ ಇದ್ದು. ರೈತರ ಅಹವಾಲು ಸ್ವೀಕರಿಸಲಿದ್ದಾರೆ ಎಂದು ಮಾಹಿತಿ ದೊರೆತಿದೆ.