ದೆಹಲಿ : ಪ್ರತಿ ಭಾರಿಯಂತೆ ಈ ಬಾರಿಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇದದ ಮಾಡಿದ್ದು. ವಾಯುಮಾಲಿನ್ಯ ಹೆಚ್ಚಾದ ಹಿನ್ನಲೆ ಈ ಕ್ರಮ ಕೈಗೊಳ್ಳಾಲಾಗಿದೆ ಎಂದು ದೆಹಲಿ ಸರ್ಕಾರ ಸ್ಪಷ್ಟನೆ ನಡೆಸಿದೆ.
ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ನಿಷೇಧವನ್ನು ಸಮರ್ಥಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ, ಆಮ್ ಆದ್ಮ ಪಕ್ಷದ ಸಂಚಾಲಕ ಅರವಿಂದ ಕೇಜ್ರವಾಲ್, ಮಾಲಿನ್ಯದಿಂದ ಜನರನ್ನು ರಕ್ಷಿಸಲು ಇದು ಅವಶ್ಯಕವಾಗಿದ್ದು, ಹಿಂದೂ-ಮುಸ್ಲಿಂ ಧೋರಣೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಿಂದೂಗಳ ಹಬ್ಬವನ್ನು ಗುರಿಯಾಗಿಸಿ ಪಟಾಕಿ ಮೇಲೆ ನಿಷೇಧ ಹೇರಲಾಗಿದೆ ಎಂಬ ಬಿಜೆಪಿ ಮತ್ತು ಆರ್‌ಎಎಸ್ ಟೀಕೆಯನ್ನು ಕೇಜ್ರವಾಲ್ ತಳ್ಳಿ ಹಾಕಿದರು.
ಇದರಲ್ಲಿ ಹಿಂದೂ-ಮುಸ್ಲಿಂ ಧೋರಣೆಯೇ ಇಲ್ಲ. ಪ್ರತಿಯೊಬ್ಬರೂ ಉಸಿರಾಡುವುದು ಮತ್ತು ಪ್ರಾಣ ಮುಖ್ಯ’ ಎಂದು ಅವರು ಹೇಳಿದರು. ‘ಮಾಲಿನ್ಯದ ದೃಷ್ಟಿಯಿಂದ ಜನರು ಪಟಾಕಿ ಸಿಡಿಸುವುದನ್ನು ತಡೆಯಬೇಕು ಮತ್ತು ದೀಪಗಳನ್ನು ಬೆಳಗಿಸಬೇಕು ಎಂದು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಪ್ರತಿಪಾದಿಸಿವೆ’ ಎಂದು ಅವರು ಉಲ್ಲೇಖಿಸಿದರು.