ದಾವಣಗೆರೆ : ಗ್ಯಾಸ್ ಕಟರ್ ಬಳಸಿ ಬ್ಯಾಂಕ್ ಲಾಕರ್ ಮುರಿದು ಚಿನ್ನಾಭರಣಗಳನ್ನು ಎಗರಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದ್ದು. ಬರೋಬ್ಬರಿ 13 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಎಗರಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಎಸ್ಬಿಐ ಬ್ಯಾಂಕ್ ನಲ್ಲಿ ದರೋಡೆ ನಡೆದಿದ್ದು. ಬೀಗ ಮುರಿದು ಒಳಗೆ ಬಂದಿರುವ ಖದೀಮರು ಸುಮಾರು 13 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಎಗರಿಸಿ ಪರಾರಿಯಾಗಿದ್ದಾರೆ. ಬ್ಯಾಂಕ್ ಲಾಕರ್ನಲ್ಲಿದ್ದ ಗ್ರಾಹಕರ ಚಿನ್ನವನ್ನು ಎಗರಿಸಿರುವ ಖದೀಮರು, ಬ್ಯಾಂಕ್ನಲ್ಲಿ ಸಾಕ್ಷನಾಶ ಪಡಿಸಿ ಓಡಿ ಹೋಗಿದ್ದಾರೆ.
ಬ್ಯಾಂಕ್ ಲಾಕರ್ನಲ್ಲಿದ್ದ ಸುಮಾರು 12.95 ಕೋಟಿ ರೂ ಮೌಲ್ಯದ ಚಿನ್ನಾಭರಣ ಕಳುವಾಗಿದ್ದು. ಕಳ್ಳತನ ಮಾಡಿದ ಮೇಲೆ ಬ್ಯಾಂಕ್ ತುಂಬ ಖಾರದ ಪುಡಿ ಎರಚಿ ಸಾಕ್ಷ ನಾಶ ಪಡಿಸಿದ್ದಾರೆ ಮತ್ತು ಸಿಸಿಟಿವಿ ಡಿವಿಆರ್ಗಳನ್ನು ಹೊತ್ತೊಯ್ದಿದ್ದಾರೆ. ಪ್ರಕರಣ ಸಂಭದ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು 5 ತಂಡಗಳನ್ನು ರಚನೆ ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ. ಚಿನ್ನಾಭರಣ ಕಳೆದುಕೊಂಡಿರುವ ಗ್ರಾಹಕರು ಆತಂಕದಲ್ಲಿದ್ದು. ಆದಷ್ಟು ಬೇಗ ಕಳ್ಳರನ್ನು ಹಿಡಿಯುವುದಾಗಿ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಹೇಳಿಕೆ ನೀಡಿದ್ದಾರೆ.