ರಾಮನಗರ : ಲಾರಿಗಳ ಮೇಲಿರುವ ಕೇಸ್ಗಳಿಗೆ ಗಣಿ ಅಧಿಕಾರಿಗಳು ದಂಡ ಕಟ್ಟು ಎಂದಿದ್ದಕ್ಕೆ ವ್ಯಕ್ತಿಯೊಬ್ಬ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮುಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಮೃತನನ್ನು ಮಾಗಡಿ ಮೂಲದ 50 ವರ್ಷದ ನಾಗೇಶ್ ಎಂದು ಗುರುತಿಸಲಾಗಿದೆ.
ಪರ್ಮಿಟ್ ಇಲ್ಲದೇ ಕ್ರಶರ್ ನಲ್ಲಿ ಲಾರಿ ಚಾಲನೆ ಮಾಡುತ್ತಿದ್ದ ಆರೋಪದ ಮೇಲೆ ಗಣಿ ಅಧಿಕಾರಿಗಳು ನಾಗೇಶನ ಲಾರಿ ಮೇಲೆ 10 ಕ್ಕೂ ಹೆಚ್ಚು ಕೇಸ್ಗಳನ್ನು ದಾಖಲು ಮಾಡಿದ್ದರು. ಈ ಸಂಬಂಧ ನಾಗೇಶ್ ಲಾರಿಗಳ ಮೇಲೆ ಸುಮಾರು 8 ಲಕ್ಷ ದಂಡ ವಿಧಿಸಿದ್ದರು. ಇಂದು ಕಛೇರಿಗೆ ಬಂದು ಅಧಿಕಾರಿಗಳ ಜೊತೆ ನಾಗೇಶ್ ಚರ್ಚಿಸಿದ್ದನು. ಆದರೆ ದಂಡ ಕಟ್ಟುವಂತೆ ಅಧಿಕಾರಿಗಳು ತಿಳಿಸುತ್ತಿದ್ದಂತೆ ಹೊರಗಡೆ ಬಂದ ನಾಗೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗಣಿ ಮತ್ತು ಭೂವಿಜ್ಞಾನ ಕಛೇರಿಯ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು. ಪತಿ ಸಾವಿಗೆ ಅಧಿಕಾರಿಗಳೇ ಕಾರಣ ಎಂದು ನಾಗೇಶ್ ಪತ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೋಲಿಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ರಾಮನಗರ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.