ಕಲಬುರಗಿ : ಉತ್ತರ ಕರ್ನಾಟಕ ಎಂದ ಕೂಡಲೇ ಹಲವರಿಗೆ ಜ್ಞಾನಪಕವಾಗುವುದು ಅಲ್ಲಿ ಖಡಕ್ ರೊಟ್ಟಿ, ಈ ಖಡಕ್ ರೊಟ್ಟಿಯನ್ನು ಈಗ ವಿಶ್ವದ ದೈತೈ ಈ-ಕಾರ್ಮಸ್ ಕಂಪನಿಗಳಾದ ಅಮೇಜಾನ್ ಮತ್ತು ಫ್ಲಿಪ್ಕಾರ್ಟ್ಗಳು ಮಾರಾಟ ಮಾಡಲು ಮುಂದಾಗಿವೆ.
ಮಾರ್ಚ್ 13 ರಂದು ಕಲಬುರಗಿಯಲ್ಲಿ ನಡೆದ ಗೃಹಜ್ಯೋತಿ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕಲಬುರಗಿ ರೊಟ್ಟಿ ಎಂಬ ಬ್ರ್ಯಾಂಡ್ ಹೆಸರಿನ ರೊಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಇದಕ್ಕಾಗಿ ಕಲಬುರಗಿ ಜಿಲ್ಲಾಡಳಿತ ಸಬ್ಸಿಡಿ ದರದಲ್ಲಿ 100 ರೊಟ್ಟಿ ತಯಾರಿಕ ಯಂತ್ರಗಳನ್ನು ವಿತರಣೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಬೆಳೆಯುವ ಮಾಲ್ದಂಡಿ ತಳಿಯ ಗುಣಮಟ್ಟದ ಬಿಳಜೋಳದಿಂದ ರೊಟ್ಟಿ ತಯಾರಿ ಮಾಡಿ ಮಾರಾಟ ಮಾಡಲಾಗುವುದು ಎಂದು ಮಾಹಿತಿ ದೊರೆತಿದೆ.
ಈ ರೊಟ್ಟಿಯನ್ನು ಅಂತರ್ರಾಷ್ಟ್ರಿಯ ಮಟ್ಟದಲ್ಲಿ ಪ್ರಖ್ಯಾತಿಗೊಳಿಸಲು ಜಿಲ್ಲಾಡಳಿತ ಸಿದ್ದತೆ ನಡೆಸಲು ನವೆಂಬರ್ 16 ರಿಂದ ಆನ್‌ಲೈನ್‌ನಲ್ಲಿ ಖಡಕ್ ರೊಟ್ಟಿಯನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತದೆ ಎಂಬ ಮಾಹಿತಿ ದೊರೆತಿದೆ. ವಿಶ್ವದ ದೈತ್ಯ ಕಂಪನಿಗಳಾದ ಫ್ಲಿಪ್ಕಾರ್ಟ್ ಮತ್ತು ಅಮೇಜಾನ್ನಲ್ಲಿ ಜನರು ಈ ರೊಟ್ಟಿಯನ್ನು ಖರೀದಿಸಬಹುದಾಗಿದ್ದು. ಕೇವಲ ಭಾರತ ಮಾತ್ರವಲ್ಲದೆ, ಇತರ ರಾಷ್ಟ್ರಗಳಲ್ಲಿಯು ಉತ್ತರ ಕರ್ನಾಟಕದ ಖಾದ್ಯವನ್ನು ಖರೀದಿಸಬಹುದಾಗಿದೆ. ಈ ಮೂಲಕ ಉತ್ತರ ಕರ್ನಾಟಕದ ರೊಟ್ಟಿ ವಿಶ್ವಮಾನ್ಯತೆಯನ್ನು ಪಡೆಯುತ್ತಿದೆ.