ಬೆಂಗಳೂರು : ದೀಪಾವಳಿ ಪ್ರಯುಕ್ತ ಸಾಲು ಸಾಲು ರಜೆಗಳು ಬಂದಿರುವ ಹಿನ್ನಲೆ ರಾಜ್ಯ ಸಾರಿಗೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ 2 ಸಾವಿರ ಹೆಚ್ಚುವರಿ ಬಸ್ ಗಳನ್ನು ನಿಯೋಜಿಸಿದೆ. ಈ ಬಾರಿ ದೀಪಾವಳಿಗೆ ದೀರ್ಘ ನಾಲ್ಕು ದಿನಗಳ ರಜೆ ಬಂದಿರುವುದರಿಂದ ರಾಜಧಾನಿಗೆ ವಲಸೆ ಬಂದಿರುವ ಹಕ್ಕಿಗಳು ತಮ್ಮ ಗೂಡಿಗೆ ವಾಪಾಸಾಗಲು ಹವಣಿಸುತ್ತಿವೆ. ಅವರಿಗೆ ಅನುಕೂಲವಾಗಲು ಈ ವ್ಯವಸ್ಥೆ ಮಾಡಲಾಗಿದೆ.
ಅಕ್ಟೋಬರ್ 31_ರಿಂದ ನವೆಂಬರ್ 3_ರ ವರೆಗೆ ನಾಲ್ಕು ದಿನಗಳು ರಜೆ
- ಅಕ್ಟೋಬರ್ 31_ರಂದು ನರಕ ಚತುರ್ದಶಿ
- ನವೆಂಬರ್ ೧_ರಂದು ಕನ್ನಡ ರಾಜ್ಯೋತ್ಸವ
- ನವೆಂಬರ್ 2_ರಂದು ಬಲಿಪಾಡ್ಯಮಿ
- ನವೆಂಬರ್ 3_ರಂದು ಭಾನುವಾರ ರಜೆ