ದೆಹಲಿ : ಮುಂದಿನ ವಾರ ದೀಪಾವಳಿ ಹಬ್ಬ.. ದೇಶದ ವಿವಿಧೆಡೆ ಕೆಲಸ ಕಾರ್ಯಗಳನ್ನ ಮಾಡ್ತಿರೋರು ತಮ್ಮ ಹುಟ್ಟೂರುಗಳತ್ತ ಬರ್ತಿದ್ದಾರೆ.. ಹೀಗಾಗಿ ದೇಶದ ಯಾವುದೇ ಪ್ರಮುಖ ರೈಲ್ವೆ ಸ್ಟೇಷನ್ಗೆ ಹೋದ್ರು, ಜನವೋ ಜನ.. ಮುಂಬೈನ ಬಾಂದ್ರಾ ಟರ್ಮಿನಲ್ ನಿಲ್ದಾಣದಲ್ಲಿ ಬಾಂದ್ರಾ ಮತ್ತು ಗೋರಖ್‌ಪುರ ಎಕ್ಸ್‌ಪ್ರೆಸ್‌ಗಾಗಿ ನಿಗದಿತ ಪ್ರಮಾಣಕ್ಕೂ ಹೆಚ್ಚಾಗಿ ನರು ಜಮಾಯಿಸಿದ್ರು.. ಹೀಗಾಗಿ ನೂಕು ನುಗ್ಗಲಿನ ಸ್ಥಿತಿ ಕಂಡು ಬಂದಿದೆ.. 15ಕ್ಕೂ ಹೆಚ್ಚು ಜನ ಕಾಲ್ತುಳಿತಕ್ಕೆ ಸಿಲುಕಿಕೊಂಡಿದ್ದಾರೆ.
ಬಾಂದ್ರಾ ಟರ್ಮಿನಲ್ನಲ್ಲಿ, ಬಾಂದ್ರಾ-ಗೋರಖ್‌ಪುರ ಅಂತ್ಯೋದಯ ಎಕ್ಸ್‌ಪ್ರೆಸ್, ನಿಗದಿತ ನಿರ್ಗಮನ ಸಮಯ ಬೆಳಗ್ಗೆ 5.15 ಕ್ಕೆ ಪ್ಲಾಟ್‌ಫಾರ್ಮ್‌ಗೆ ಬಂದಿದೆ.. ಕೆಲವು ಪ್ರಯಾಣಿಕರು ರೈಲು ಚಲಿಸುತ್ತಿರುವಾಗಲೇ ಹತ್ತಲು ಪ್ರಯತ್ನಿಸಿದ್ದಾರೆ.. ಈ ವೇಳೆ ಇಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.. ಉಳಿದಂತೆ ಒಬ್ಬರನ್ನು ಮತ್ತೊಬ್ಬರು ತಳ್ಳಿದ ಪರಿಣಾಮ 15 ಜನರು ಗಾಯಗೊಂಡಿದ್ದಾರೆ.. ತಕ್ಷಣವೇ ಅಲ್ಲಿದ್ದ ರೈಲ್ವೆ ಸಿಬ್ಬಂದಿ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮುಂದಿನ ವಾರ ಹಬ್ಬಗಳು ಇರುವುದರಿಂದ ಪಶ್ಚಿಮ ರೈಲ್ವೆ ಮತ್ತು ಕೇಂದ್ರ ರೈಲ್ವೆ ಈಗಾಗಲೇ ಎಲ್ಲಾ ರೈಲುಗಳಿಗೆ ಅಧಿಸೂಚನೆಗಳನ್ನು ಹೊರಡಿಸಿವೆ.. ವಿಶೇಷ ರೈಲುಗಳ ಸಂಚಾರವೂ ಆರಂಭವಾಗಿದೆ.. ಜೊತೆಗೆ ಟಿಕೆಟ್‌ಗಳಿಗಾಗಿ ಹೆಚ್ಚುವರಿ ಕೌಂಟರ್‌ಗಳನ್ನು ತೆರೆದಿದೆ.. ಸಾಕಷ್ಟು ಸಂಖ್ಯೆಯ GRP ಸಿಬ್ಬಂದಿ, RPF ಸಿಬ್ಬಂದಿ ಮತ್ತು ಟಿಕೆಟ್-ಚೆಕಿಂಗ್ ಸಿಬ್ಬಂದಿಗಳನ್ನು ನಿಯೊಜಿಸಲಾಗಿದೆ.. ಆದ್ರೂ ಜನ ನಿಯಮಗಳನ್ನು ಮೀರುವ ಪ್ರಯತ್ನ ಮಾಡ್ತಿದ್ದಾರೆ ಅಂತಾ ರೈಲು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಘಟನೆಯನ್ನು ಖಂಡಿಸಿರುವ ಮಹಾರಾಷ್ಟ್ರ ಅಘಾಡಿ ಕ್ಯಾಂಪ್, ಬಾಂದ್ರಾ ಕಾಲ್ತುಳಿತ ಘಟನೆ ಟ್ಯಾಗ್ ಮಾಡಿ ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಈ ಸರ್ಕಾರದಲ್ಲಿ ರಾಜ್ಯದಲ್ಲಿ ಜನಸಾಮಾನ್ಯರ, ಬಡವರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಹದಿನೈದಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದಕ್ಕೆ ರೈಲ್ವೆ ಮತ್ತು ಸಚಿವರ ಉತ್ತರವಿದೆಯೇ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಗುರಿಯಾಗಿಸಿ, ಮಹಾರಾಷ್ಟ್ರ ಚುನಾವಣೆಗೆ ಅವರನ್ನು ಬಿಜೆಪಿಯ ಉಸ್ತುವಾರಿಯನ್ನಾಗಿ ಮಾಡಲಾಗಿದೆ, ಅವರು ಚುನಾವಣೆಯಲ್ಲಿ ಗೆಲ್ಲಲು ಇಲ್ಲಿಯೇ ಉಳಿದಿದ್ದಾರೆ. ಆದ್ರೆ, ಜನ ಸಾಮಾನ್ಯರ ಜೀವನದ ಬಗ್ಗೆ ಅವರಿಗೆ ಕಿಂಚಿತ್ತು ಕಾಳಜಿ ಇಲ್ಲ ಇವರೊಬ್ಬರು ರೈಲು ಮಂತ್ರಿಯಲ್ಲ ರೀಲ್ ಮಂತ್ರಿ ಅಂತಾ ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಮುಂಬಯಿ ಬಾಂದ್ರಾದ ಜೊತೆಗೆ ಸೂರತ್ ನಲ್ಲೂ ಇದೇ ರೀತಿಯ ಘಟನೆ ಕಂಡು ಬಂದಿದ್ದು ರೈಲು ನಿಲ್ದಾಣಗಳಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಗುಂಪು ಸೇರಿದ್ದ ಜನರನ್ನು ಹತೋಟಿಗೆ ತರುವ ಪ್ರಯತ್ನ ಸೂರತ್ ಮತ್ತು ಬಾಂದ್ರಾ ನಿಲ್ದಾಣಗಳಲ್ಲಿ ನಡೆಯುತ್ತಿದೆ. ಇಡೀ ದೇಶಾದ್ಯಂತ ರೈಲು ನಿಲ್ದಾಣಗಳಲ್ಲಿ ಹಬ್ಬಗಳ ಹಿನ್ನೆಲೆ ಹೆಚ್ಚಿನ ಪ್ರಯಾಣಿಕರು ಆಗಮಿಸುವ ಹಿನ್ನೆಲೆ ಮತ್ತಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಕೇಂದ್ರ ರೈಲು ಇಲಾಖೆ ಮುಂದಾಗಿದೆ.