ಬೆಂಗಳೂರು : ನಗರದಲ್ಲಿ ಮತ್ತೊಂದು 6 ಅಂತಸ್ತಿನ ಕಟ್ಟಡ ವಾಲಿಕೊಂಡಿದ್ದು. ಬೀಳುವ ದುಸ್ಥಿತಿಗೆ ತಲುಪಿದೆ ಕೇವಲ 253 ಚದರ ಅಡಿ ಜಾಗದಲ್ಲಿ ಇಷ್ಟು ಎತ್ತರಕ್ಕೆ ಕಟ್ಟಡ ಕಟ್ಟಿರುವುದು ನಿಜಕ್ಕೂ ಭಯಾನಕವಾಗಿದ್ದು. ಇದಕ್ಕೆ ಬಿಬಿಎಂಪಿಯಿಂದ ಅನುಮತಿ ಪಡೆದಿದ್ದೇವೆ ಎಂದು ಕಟ್ಟಡದ ಮಾಲೀಕ ಹೇಳಿದ್ದಾನೆ.
ಹೊರಮಾವು ಹತ್ತಿರದಮ ನಂಜಪ್ಪ ಗಾರ್ಡನ್ ನಲ್ಲಿರುವ ಈ ಕಟ್ಟಡ ಬಿರುಕು ಬಿಟ್ಟು ವಾಲಿದ್ದು. ನಿರ್ಮಾಣ ಹಂತದಲ್ಲಿರುವ 6 ಅಂತಸ್ತಿನ ಕಟ್ಟಡ ಇದಾಗಿದೆ. ಪುಟ್ಟಪ್ಪ ಎಂಬುವವರಿಗೆ ಸೇರಿದ ಕಟ್ಟಡವಾಗಿದ್ದು. ಕೇವಲ 12:21 ಸೈಟ್ ನಲ್ಲಿ 6 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಕಟ್ಟಡ ತೆರವಿಗೆ ಬಿಬಿಎಂಪಿ ಅಧಿಕಾರಿಗಳ ಸೂಚನೆ ನೀಡಿದ್ದು ನಮ್ಮ ಸ್ವಂತ ಖರ್ಚಲ್ಲಿ ತೆರವು ಮಾಡುತ್ತೇವೆ ಎಂದು ಕಟ್ಟಡದ ಮಾಲೀಕ ಮಾಹಿತಿ ನೀಡಿದ್ದಾನೆ.
ಐದಾರು ದಿನಗಳಿಂದ ನಿರಂತರವಾಗಿ ಮಳೆ ಬಂದ ಕಾರಣ ಕಟ್ಟಡ ವಾಲಿದೆ ಎಂದು ಮಾಹಿತಿ ದೊರೆತಿದ್ದು. ಇಷ್ಟು ಎತ್ತರಕ್ಕೆ ಮನೆ ನಿರ್ಮಿಸಲು ಅದ್ಯಾವ ಅಧಿಕಾರಿ ಅನುಮತಿ ನೀಡಿದ್ದಾರೆ ಎಂಬುದು ನಿಜಕ್ಕೂ ಗಮಿನಿಸಬೇಕಾದ ವಿಶಯವಾಗಿದೆ.