ಹಾಸನ : ವರ್ಷದಲ್ಲಿ ಕೇವಲ 9 ದಿನಗಳ ಕಾಲ ಭಕ್ತರಿಗೆ ದರ್ಶನ ನೀಡುವ ಹಾಸನ ಅಧಿದೇವತೆ ಹಾಸನಾಂಬೆಯ ದರ್ಶನ ಇಂದಿನಿಂದ ಆರಂಭವಾಗಿದ್ದು. ಇಂದಿನಿಂದ ನವೆಂಬರ್ 03ರವರೆಗೆ ನಿರಂತರವಾಗಿ ತನ್ನ ಭಕ್ತರಿಗೆ ತಾಯಿ ಹಾಸನಾಂಬೆ ದರ್ಶನ ನೀಡುತ್ತಾರೆ. ಕೇವಲ ಕರ್ನಾಟಕವಲ್ಲದೆ ದಕ್ಷಿಣ ಭಾರತದ ಹಲವಾರು ರಾಜ್ಯಗಳ ಜನರು ಇಲ್ಲಿಗೆ ಬಂದು ತಾಯಿಯ ದರ್ಶನಕ್ಕೆ ಪಾತ್ರರಾಗುತ್ತಾರೆ.
ಆ ತಾಯಿಯ ದರ್ಶನ ಕೇವಲ ವರುಷಕ್ಕೆ ಒಮ್ಮೆ ಮಾತ್ರ. ಒಮ್ಮೆ ಹಚ್ಚಿಟ್ಟ ಮಹಾದೀಪ ವರ್ಷಪೂರ್ತಿಯೂ ಉರಿಯುತ್ತೆ. ಮುಡಿಸಿದ ಹೂಗಳು ಸಹ ಎಂದು ಬಾಡುವುದಿಲ್ಲ. ಇಂತಹ ಪವಾಡಗಳನ್ನ ಸೃಷ್ಟಿಸಿ ಬೇಡಿದ ವರವನ್ನ ನೀಡುವ ಹಾಸನಾಂಬೆಯ ದರ್ಶನ ಆರಂಭವಾಗಿದೆ. ಲಕ್ಷಾಂತರ ಭಕ್ತರು ಹರಿದು ಬರಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದೆ.
ಹಾಸನದ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಸೇರಿದಂತೆ ಆದಿಚುಂಚನಗಿರಿ ಮಹಾ ಸಂಸ್ಥಾನದ ಸ್ವಾಮಿಜಿ ನಿರ್ಮಲಾನಂದ ಸ್ವಾಮೀಜಿ, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಸೇರಿದಂತೆ ರಾಜಕೀಯ ಗಣ್ಯರು ಈ ಶುಭ ಸಂಧರ್ಭದಲ್ಲಿ ಹಾಜರಿದ್ದರು.
ಈ ಬಾರಿಯು ವರ್ಷದ ನಂತರ ದೇವಾಲಯದ ಬಾಗಿಲನ್ನು ತೆರೆದಿದ್ದ ಸಮಯದಲ್ಲಿ ಹಿಂದಿನ ವರ್ಷ ಹಚ್ಚಿದ ದೀಪ ಉರಿಯುತ್ತಲೆ ಇದೆ. ದೇವರಿಗೆ ಅರ್ಪಿಸಿದ ಹೂಗಳು ಸಹ ಬಾಡಿಲ್ಲ, ದೇವಿಗೆ ಅರ್ಪಿಸಿದ ನೈವೇದ್ಯವು ಹಾಗೆಯೆ ಇದೆ. ಇದನ್ನು ನೋಡಿದ ಭಕ್ತರು ಭಕ್ತಿಯಲ್ಲಿ ತಲ್ಲೀನರಾಗಿದ್ದು. ದೇವಿಯ ದರ್ಶನ ಪಡೆದು ಪುನೀತರಾಗಲು ಕಾತರರಾಗಿದ್ದಾರೆ