Tuesday, October 22, 2024

ಬ್ರಿಕ್ಸ್ ಸಮಾವೇಶ: ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಕೃಷ್ಣ ಭಜನೆ ಮೂಲಕ ಭರ್ಜರಿ ಸ್ವಾಗತ

ದೆಹಲಿ : ರಷ್ಯಾದ ಕಜಾನ್ನಲ್ಲಿ ಆಯೋಜನೆಗೊಂಡಿರುವ 16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ತೆರಳಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಭರ್ಜರಿ ಸ್ವಾಗತ ದೊರೆತಿದೆ. ರಷ್ಯಾದ ನಾಗರಿಕರು ಮೋದಿಗೆ  ಕೃಷ್ಣ ಭಜನೆಯ ಮೂಲಕ ಸ್ವಾಗತಿಸಿರುವುದು ವಿಶೇಷವಾಗಿತ್ತು. ರಿಪಬ್ಲಿಕ್ ಆಫ್ ಟಾರ್ಟನ್ ಮುಖ್ಯಸ್ಥ ರುಸ್ತುಮ್ ನಿಖಾಮ್ ಅವರು ವಿಮಾನ ನಿಲ್ದಾಣದಲ್ಲಿ ಪ್ರಧಾನಿಯವರನ್ನು ಬರಮಾಡಿಕೊಂಡರು.

ಬ್ರಿಕ್ಸ್​ ಶೃಂಗ ಸಭೆಯಲ್ಲಿ ನರೇಂದ್ರ ಮೋದಿಯವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿಂಗ್​ ಪಿನ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಗಳಿವೆ. ಇದೇ ವೇಳೆ ರಷ್ಯಾ-ಉಕ್ರೇನ್ ಯುದ್ದದ ಬಗ್ಗೆಯೂ ನರೇಂದ್ರ ಮೋದಿಯವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.

ತಮ್ಮ ರಷ್ಯಾ ಭೇಟಿಯ ಬಗ್ಗೆ ಎಕ್ಷ್​ನಲ್ಲಿ ಬರೆದುಕೊಂಡಿರುವ ಮೋದಿ
ನಾನು ಬ್ರಿಕ್ಸ್ ಶೃಂಗಸಭೆಯಲ್ಲಿ (BRICS Summit) ಭಾಗವಹಿಸಲು ರಷ್ಯಾ ದ ಕಜಾನಗೆ ಹೊರಟಿದ್ದೇ ನೆ. ಭಾರತವು‘ಬ್ರಿಕ್ಸ್’ಗೆ ಅಪಾರ ಪ್ರಾಮುಖ್ಯತೆಯನ್ನು ನೀಡುತ್ತದೆ. ನಾನು ಪ್ರಮುಖ ವಿಷಯಗಳ ಕುರಿತು ವ್ಯಾಪಕವಾದಚರ್ಚೆಗಳನ್ನು ಎದುರುನೋಡುತ್ತಿದ್ದೇನೆ. ಜತೆಗೆ, ವಿವಿಧ ದೇಶಗಳ ನಾಯಕರನ್ನು ಭೇಟಿಮಾಡಲು ಬಯಸಿದ್ದೇನೆಎಂದು ಪ್ರಧಾನಿಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬ್ರಿಕ್ಸ್ ಎಂದರೆ ಏನು ? 

ಪಾಶ್ಚಿ ಮಾತ್ಯ ರಾಷ್ಟ್ರ ಗಳ ಒಕ್ಕೂಟಕ್ಕೆ ಪರ್ಯಾಯವಾಗಿ ಈ ಮಿತ್ರಕೂಟ ರಚನೆಯಾಗಿದೆ ಎಂದು ಹೇಳಲಾಗಿದೆ.
ಆರಂಭದಲ್ಲಿ ಬ್ರೆ ಜಿಲ್, ರಷ್ಯಾ , ಭಾರತ, ಚೀನಾ ಹಾಗೂ ದಕ್ಷಿಣಆಫ್ರಿಕಾ ರಾಷ್ಟ್ರಗಳು ಮಾತ್ರ ಸದಸ್ಯತ್ವ
ಹೊಂದಿದ್ದವು. ಈ ವರ್ಷ ಇರಾನ್, ಈಜಿಪ್ಟ್, ಇಥಿಯೋಪಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ
ಅರೇಬಿಯಾ ರಾಷ್ಟ್ರಗಳು ಸೇರ್ಪ‍ಡೆಯಾದವು. ಟರ್ಕಿ, ಅಜರ್ಬೈಜಾನ್, ಮಲೇಷ್ಯಾ ಕೂಡ ಔಪಚಾರಿಕವಾಗಿ
ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದು , ಇನ್ನಷ್ಟು ರಾಷ್ಟ್ರಗಳು ಸೇರ್ಪಡೆಯಾಗಲು ಒಪ್ಪಿಗೆ ಸೂಚಿಸಿವೆ.

RELATED ARTICLES

Related Articles

TRENDING ARTICLES