ಬೆಂಗಳೂರು : ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿಯೊಬ್ಬರು ಸಾವನಪ್ಪಿದ್ದು, ಆಕ್ರೋಶಿತರಾದ ಕುಟುಂಬಸ್ಥರ
ಆಸ್ಪತ್ರೆ ಕಿಟಕಿ, ಬಾಗಿಲಿನ ಗಾಜುಗಳನನು ಪುಡಿಗೊಳಿಸಿ ಘಟನೆ ಅತ್ತಿಬೆಲೆಯ ಆಕ್ಸ್‌ಫರ್ಡ್ ಆಸ್ಪತ್ರೆಯಲ್ಲಿ ನಡೆದಿದೆ.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯ ಆಕ್ಸ್‌ಫರ್ಡ್ ಆಸ್ಪತ್ರೆಯಲ್ಲಿ
ಹೆಬ್ಬಗೋಡಿ ನಿವಾಸಿ ಮಮತಾ(29) ಎಂಬ ಯುವತಿ ಕಳೆದ ನಾಲ್ಕು ದಿನಗಳ ಹಿಂದೆ ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ರಾತ್ರಿ ದಿಡೀರನೆ ಸಾವನ್ನಪ್ಪಿರುವುದು ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಎಂಬಿಎ ವ್ಯಾಸಂಗ ಮುಗಿಸಿ ಸ್ವಂತ ಬಿಸಿನೆಸ್ ಮಾಡುತ್ತಿದ್ದ ಯುವತಿ.ಕಳೆದ ನಾಲ್ಕೈದು ದಿನಗಳ ಹಿಂದೆ ಜ್ವರದಿಂದ ಆಕ್ಸ್‌ಫರ್ಡ್ ಆಸ್ಪತ್ರೆಯಲ್ಲಿ ಆಡ್ಮಿಟ್ ಆಗಿದ್ದರು. ನಿನ್ನೇ ಎಕ್ಸ್ ರೇ ಮಾಡಿದ್ದ ವೈದ್ಯರು
ಹೃದಯ ಸಂಬಂಧಿ ಕಾಯಿಲೆ ಇದೇ ಎಂದು ತಿಳಿಸಿ.ಜಯದೇವ ಆಸ್ಪತ್ರೆಗೆ ಶಿಫ್ಟ್ ಮಾಡುವುದಾಗಿ ಹೇಳಿದ್ದರು.
ಮತ್ತೆ ಮುಂಜಾನೆ ಬಂದು ನಮ್ಮಲ್ಲೇ ವೈದ್ಯರಿದ್ದಾರೆ ಎಂದು ಚಿಕಿತ್ಸೆ ಮುಂದುವರೆಸಿದ್ದರು ಎಂದು ತಿಳಿದು ಬಂದಿದೆ.
ಚಿಕಿತ್ಸೆಗೆಂದು ನೆನ್ನೆ ಸಂಜೆ ನರ್ಸ್ ಒಬ್ಬರು ಮಮತಾಗೆ ಇಂಜೆಕ್ಷನ್ ನೀಡಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ರೋಗಿ ಮಮತಾ ಸಾವನಪ್ಪಿದ್ದರು. ಇದರಿಂದ ಆಕ್ರೋಶಿತರಾದ ಆಸ್ಪತ್ರೆ ಆಡಳಿತ ಮಂಡಳಿ ಮತ್ತು ವೈದ್ಯರ ನಿರ್ಲಕ್ಷ್ಯದಿಂದ ಯುವತಿ ಸಾವನಪ್ಪಿದ್ದಾರೆ ಎಂದು ಆರೋಪಿಸಿ ಆಸ್ಪತ್ರೆಯ ಕಿಟಕಿ ಬಾಗಿಲಿನ ಗಾಜುಗಳನ್ನ ಪುಡಿಗೊಳಿಸಿದ್ದಾರೆ. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು.ಸ್ಥಳಕ್ಕೆ ಅತ್ತಿಬೆಲೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.