Wednesday, October 16, 2024

ರತನ್ ಟಾಟಾಗೆ ನ್ಯಾನೋ ಕಾರ್ ತಯಾರಿಸಲು ಪ್ರೇರಣೆಯಾಗಿದ್ದು ಬೆಂಗಳೂರಿನ ಅಪಘಾತ

ರತನ್ ಟಾಟಾ ಇವತ್ತಿಗೆ ನಮ್ಮೊಂದಿಗೆ ಇಲ್ಲ, ಅಂದ್ರು ಕೂಡ ಅವರು ಮಾಡಿದ ಸಾಮಾಜಿಕ ಕಾರ್ಯಗಳು ಎಂಥವರ ಕಣ್ಣಲ್ಲೂ ಕೂಡ ನೀರು ತರಿಸುವಂತದ್ದು, ಸಾಮಾನ್ಯ ಜನರ ಜೀವನವನ್ನು ಹೇಗೆ ಸುಧಾರಿಸುವುದು? ಅನ್ನೋದರ ಬಗ್ಗೆಯೇ ಯೋಚಿಸುತ್ತಿದ್ದವರು. ಈ ಹಿನ್ನೆಲೆ ಕಾರು ಕೊಳ್ಳಲಾಗದ ಮಧ್ಯಮ ವರ್ಗದವರ ಕಾರು ಓಡಿಸುವ ಕನಸನ್ನು ಹೇಗೆ ನನಸು ಮಾಡಬಹುದು? ಎಂದು ಅವರು ಸದಾ ಯೋಚಿಸಿದ್ದರು. ಇದರ ಪರಿಣಾಮವೇ ಭಾರತದ ಅತ್ಯಂತ ಕಡಿಮೆ ಬೆಲೆಯ ಕಾರು ಟಾಟಾ ನ್ಯಾನೋ ಕಾರಿನ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿತು. ಅದರಲ್ಲೂ ವಿಶೇಷವಾಗಿ ರತನ್ ಟಾಟಾ ಅವರಿಗೆ ಈ ನ್ಯಾನೋ ಕಾರಿನಾ ಐಡಿಯಾ ಬಂದಿದ್ದೆ ಸಿಲಿಕಾನ್ ಸಿಟಿಯ ಟ್ರಾಫಿಕ್ ಜಾಮ್ ನಲ್ಲಿ.

ಹೌದು, ಒಮ್ಮೆ ರತನ್ ಟಾಟಾ ಬೆಂಗಳೂರಿಗೆ ಬಂದಾಗ ಟ್ರಾಫಿಕ್ ಜಾಮ್ ನಲ್ಲಿ ಓರ್ವ ದಂಪತಿಯನ್ನು ನೋಡ್ತಾರೆ, ಕಷ್ಟಪಟ್ಟು ಮಕ್ಕಳುನ್ನ ಬೈಕ್ ನಲ್ಲಿ ಕೂರಿಸಿಕೊಂಡು ಹೋಗ್ತಾ ಇದ್ದಂತಹ ದಂಪತಿಗಳನ್ನ ನೋಡಿ, ನಾನ್ ಯಾಕೆ ಮಧ್ಯಮ ವರ್ಗದ ಜನರಿಗೆ ಕಡಿಮೆ ಬೆಲೆಯ ಅತ್ಯುತ್ತಮ ಕಾರ್ ಕೊಡಬಾರದು ಅಂತ ಯೋಚನೆ ಮಾಡುತ್ತಾರೆ, ಆಗ ಹುಟ್ಟಿಕೊಂಡ ಐಡಿಯಾ ಈ ಟಾಟಾ ನ್ಯಾನೋ. ಈ ಕುರಿತು ರತನ್ ಟಾಟಾ ಅವರೇ ನ್ಯಾನೋ ಕಾರ್ ಬಗ್ಗೆ ಹೇಳಿಕೊಂಡಿದ್ದಾರೆ.

ಇನ್ನು ಅತ್ಯಂತ ಕಡಿಮೆ ಬೆಲೆಗೆ ಅಂದರೆ ಕೇವಲ 1 ಲಕ್ಷ ರೂ.ಗೂ ಕಾರು ಸಿಗಬಹುದೆಂಬ ಕುತೂಹಲ ಎಲ್ಲರ ಮನದಲ್ಲಿ ಮೂಡಿತ್ತು. ಆದರೆ ರತನ್ ಟಾಟಾ ನಿಜವಾಗಿಯೂ ಅದನ್ನು ಮಾಡಿ ತೋರಿಸಿದರು. ಮಧ್ಯಮ ವರ್ಗದವರು & ಬಡವರ ಕಾರು ಖರೀದಿಸುವ ಆಸೆಯನ್ನು ಟಾಟಾ ನ್ಯಾನೋ ಮೂಲಕ ನನಸು ಮಾಡಿದರು. ರತನ್ ಟಾಟಾ ಅವರ ಸಾಧನೆಗೆ ಈಗ ಟಾಟಾ ನ್ಯಾನೋ ಖರೀದಿ ಮಾಡಿದ ಮಾಲೀಕರು ರತನ್ ಟಾಟಾ ಅವರ ಸಾಧನೆಯನ್ನ ಈಗ ಸಾಮಾಜಿಕ ಜಾಲ ತಾಣದಲ್ಲಿ ಹಾಡಿ ಹೊಗಳುತ್ತಿದ್ದಾರೆ..

ಒಟ್ಟಾರೆಯಾಗಿ ಏನೇ ಆಗಲಿ ಮಧ್ಯಮ ವರ್ಗದವರನ್ನ ಖುಷಿಪಡಿಸುವ ಸಲುವಾಗಿ, ಜೊತೆಗೆ ನಾವು ಕೂಡ ಒಂದು ಕಾರ್ ಖರೀದಿ ಮಾಡಬಹುದು ಎಂಬ ಕನಸನ್ನ ನನಸು ಮಾಡಿದ ಹೆಗ್ಗಳಿಕೆ ರತನ್ ಟಾಟಾ ಅವರಿಗೆ ಸಲ್ಲತ್ತೆ. ಆದ್ರೆ ರತನ್ ಟಾಟಾ ಇವತ್ತಿಗೆ ನಮ್ಮೊಂದಿಗೆ ಇಲ್ಲ ಅನ್ನೋದೇ ಬೇಸರದ ಸಂಗತಿ,,

 

RELATED ARTICLES

Related Articles

TRENDING ARTICLES