Wednesday, October 16, 2024

ಆಯುಧ ಪೂಜೆ ಆಚರಣೆಯ ಹಿನ್ನಲೆ ಗೊತ್ತೆ ನಿಮಗೆ ?

ಆಯುಧ ಪೂಜೆ ಆಚರಣೆಯು ನವರಾತ್ರಿಯ ಕೊನೆಯ ದಿನವಾದ ನವಮಿಯೆಂದು ಜರುಗುತ್ತದೆ. ಈ ದಿನ ಸಾಮಾನ್ಯವಾಗಿ ಜನರು ತಮ್ಮ ವಾಹನಗಳಿಗೆ, ತಮ್ಮ ಅಂಗಡಿಗಳಿಗೆ ಮತ್ತು ದಿನನಿತ್ಯ ತಮ್ಮ ಕೆಲಸಗಳಿಗೆ ಉಪಯೋಗಿಸುವ ವಸ್ತುಗಳಿಗೆ ಪೂಜೆ ಸಲ್ಲಿಸುತ್ತಾರೆ. ಆದರೆ ಈ ಆಚರಣೆಯ ಪೌರಾಣಿಕ ಹಿನ್ನಲೆಯನ್ನು ಯಾರು ತಿಳಿದುಕೊಂಡಿರುವುದಿಲ್ಲ. ಆಯುಧ ಪೂಜೆಗೆ 2 ಪೌರಾಣಿಕ ಹಿನ್ನಲೆಯ ಕಥೆಗಳಿದ್ದು ಅವುಗಳನ್ನು ಕಳೆಗೆ ತಿಳಿದುಕೊಳ್ಳುವಿರಿ.

ಹಿನ್ನಲೆ1: ಮಾತೆ ದುರ್ಗೆಯಿಂದ ಮಹಿಷನ ಸಂಹಾರ

ಮಹಿಷಾಸುರನೆಂಬ ರಾಕ್ಷಸನು ಮಹಿಷ ಮಂಡಲವನ್ನು ಆಳುತಿದ್ದನು. ಆತನ ಆಳ್ವಿಕೆಯಲ್ಲಿ ಆಶಾಂತಿ, ಅನ್ಯಾಯಗಳು ತಾಂಡವವಾಡುತ್ತಿದ್ದವು. ಋಷಿ ಮುನಿಗಳು ಲೋಕ ಕಲ್ಯಾಣಕ್ಕಾಗಿ ಹೋಮ ಹವನಗಳನ್ನು ಮಾಡಲು ಬಿಡದೆ ದೇವತೆಗಳ ಮೇಲೆಯೆ ಯುದ್ದ ಸಾರಿದನು ಎಂದು ಹೇಳಲಾಗುತ್ತದೆ.

ಇದರಿಂದ ಬೇಸತ್ತ ದೇವತೆಗಳು ತಮ್ಮಿಂದ ಮಹಿಷನನ್ನು ಸಂಹಾರ ಮಾಡಲಾಗುವುದಿಲ್ಲ ಎಂದ ಅರಿತು. ಮಾತೆ ದುರ್ಗೆಯ ಮೊರೆ ಹೋಗುತ್ತಾರೆ. ಮಾತೆ ದುರ್ಗೆಗೆ ತಮ್ಮ ಎಲ್ಲಾ ಶಸ್ತ್ರಗಳನ್ನು ನೀಡಿ ಮಹಿಷಾಸುರನನ್ನು ಸಂಹಾರ ಮಾಡುವಂತೆ ಕೋರುತ್ತಾರೆ. ಎಲ್ಲಾ ದೇವತೆಗಳ ಶಕ್ತಿಯನ್ನು ಪಡೆದ ಮಾತೆ ದುರ್ಗೆ 10 ಕೈಗಳಲ್ಲಿ ಶಸ್ತ್ರಗಳನ್ನು ಹಿಡಿದು ಪ್ರತ್ಯಕ್ಷರಾಗುತ್ತಾರೆ. ಮಾತೆ ದುರ್ಗೆ ಮತ್ತು ಮಹಿಷನ ನಡುವೆ ಸತತ 9 ದಿನಗಳ ಕಾಲ ಯುದ್ದ ನಡೆದು ನವಮಿಯ ದಿನ ಮಹಿಷನ ಸಂಹಾರ ಮಾಡಲಾಯಿತು ಎಂದು ನಂಬಲಾಗಿದೆ. ನಂತರ ಮಾತೆ ದುರ್ಗೆ ದೇವತೆಗಳ ಆಯುಧಗಳನ್ನು ವಾಪಾಸು ನೀಡಿದಾಗ ಆ ಆಯುಧಗಳನ್ನು ದೇವತೆಗಳು ಪೂಜೆ ಮಾಡಿ ಸ್ವೀಕರಿಸಿದರು ಈ ಪೌರಾಣಿಕ ಹಿನ್ನಲೆಯಿಂದಾಗಿ ಜನರು ಆಯುಧ ಪೂಜೆ ಮಾಡುತ್ತಾರೆ ಎಂದು ನಂಬಲಾಗಿದೆ.

ಹಿನ್ನಲೆ 2: ಪಾಂಡವರು ತಮ್ಮ ಆಯುಧಗಳನ್ನು ವಾಪಾಸು ಪಡೆದ ದಿನ

ಪಾಂಡವರು ಜೂಜಾಟದಲ್ಲಿ ಸೋತ ನಂತರ 12 ವರ್ಷಗಳ ಕಾಲ ಅರಣ್ಯವಾಸ ಮತ್ತು 1 ವರ್ಷಗಳ ಅಜ್ಞಾತವಾಸಕ್ಕೆ ಹೋಗುತ್ತಾರೆ. ಈ ಸಮಯದಲ್ಲಿ ಪಾಂಡವರು ತಮ್ಮ ಆಯುಧಗಳನ್ನು ಬನ್ನಿ ಮರದಲ್ಲಿ ಅಡಗಿಸಿ ಹೋಗುತ್ತಾರೆ ಎಂದು ನಂಬಲಾಗಿದೆ.

ಅಜ್ಞಾತವಾಸದಲ್ಲಿರುವಾಗ ಪಾಂಡವರು ವಿರಾಟ ರಾಜನ ಬಳಿ ವೇಶ ಬದಲಿಸಿಕೊಂಡು ಆಶ್ರಯ ಪಡೆಯುತ್ತಾರೆ.ಈ ಸಮಯದಲ್ಲಿ ಕೌರವರು ವಿರಾಟ ರಾಜ್ಯದ ಮೇಲೆ ದಾಳಿ ಮಾಡಿ ಹಸುಗಳನ್ನು ಅಪಹರಿಸುತ್ತಾರೆ. ಈ ಸಮಯದಲ್ಲಿ ವಿರಾಟನ ಮಗ ಉತ್ತರ ಕುಮಾರ ಯುದ್ದಕ್ಕೆ ಬರುತ್ತಾನೆ ಮತ್ತು ಆತನ ಸಾರಥಿಯಾಗಿ ಬೃಹನ್ನಳೆ ವೇಶದಲ್ಲಿದ್ದ ಅರ್ಜುನ ಬರುತ್ತಾನೆ.

ಕೌರವರ ಬೃಹತ್ ಸೇನೆಯನ್ನು ನೋಡಿದ ಉತ್ತರ ಯುದ್ದಭೂಮಿಯಿಂದ ಹೆದರಿ ಹೋಡಿಹೋಗುತ್ತಾನೆ ಈ ಸಮಯದಲ್ಲಿ ಅರ್ಜುನ ತಮ್ಮ ಆಯುಧಗಳನ್ನು ವಾಪಾಸು ಪಡೆಯಲು ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ತಮ್ಮ ಆಯುಧಗಳನ್ನು ವಾಪಾಸು ಪಡೆಯುತ್ತಾರೆ ಎಂದು ನಂಬಲಾಗಿದ್ದು ಇದರಿಂದಾಗಿ ಆಯುಧ ಪೂಜೆಯು ಆಚರಣೆಗೆ ಬಂದಿದೆ ಎಂದು ನಂಬಲಾಗಿದೆ.

ಏನೇ ಆದರು ವರ್ಷಪೂರ್ತಿ ನಮ್ಮ ಹೇಳಿಗೆಗಾಗಿ ಮತ್ತು ನಮ್ಮ ಯಶಸ್ಸಿಗಾಗಿ ದುಡಿಯುವ ಯಾವುದೇ ವಸ್ತುವಾದರು ಅದು ಪೂಜೆಗೆ ಅರ್ಹವೆಂದು ಹೇಳಬಹುದು.

RELATED ARTICLES

Related Articles

TRENDING ARTICLES