Wednesday, October 16, 2024

ಮೈ ಸೋಮಣ್ಣ ಬೊಲ್​ರಹಾ ಹೂಂ: ಹಿಂದಿ ಕಲಿಯಲು ಮುಂದಾದ ವಿ.ಸೋಮಣ್ಣ

ಮೈ ಸೋಮಣ್ಣ ಬೋಲ್‌ರಹಾ ಹೂಂ..(ನಾನು ಸೋಮಣ್ಣ ಮಾತನಾಡುತ್ತಿದ್ದೇನೆ). ಕೈಸಾ ಹೈ ಸಾಬ್ ಮೇರಾ ಹಿಂದಿ. ಮೈ ಬಿ ಹಿಂದಿ‌ ಸೀಕ್ ರಹಾ ಹೂಂ. ಎಂದು ಹರಳು ಹುರಿದಂತೆ ಹಿಂದಿ ಮಾತನಾಡುತ್ತಿರುವು ಬೇರೆ ಯಾರು ಅಲ್ಲ. ರಾಜ್ಯ ರೈಲ್ವೇ ಖಾತೆ ಸಚಿವ ವಿ. ಸೋಮಣ್ಣ.

ಹಿಂದಿಯ ಗಂಧಗಾಳಿ ಇಲ್ಲದ ಸೋಮಣ್ಣ ಈಗ ಹಿಂದಿ ಮಾತಾಡ್ತಾರೆ. ಕೇಂದ್ರ ಸಚಿವರಾದ ಬಳಿಕ ಭಾಷೆ ಬಗ್ಗೆ ಒತ್ತು ನೀಡಿದ ವಿ ಸೋಮಣ್ಣ. ಕನ್ನಡ ಮಾತ್ರ ಮಾತನಾಡುತ್ತಿದ್ದರು. ವಿ ಸೋಮಣ್ಣ, ಎಂದಿಗೂ ಅಪಭ್ರೌಂಶವಾಗಿ ಹಿಂದಿ ಮಾತಾಡಿಲ್ಲ. ನಗೆಪಾಟಲಿಗೆ ಈಡಾಗಬಾರದು ಎಂದು ಭಾಷೆ ಕಲಿಯಲು ತೀರ್ಮಾನ ಮಾಡಿರುವ ವಿ.ಸೋಮಣ್ಣ ಹಿಂದಿ ಶಿಕ್ಷಕರ ಸಹಾಯದಿಂದ ಹಿಂದಿ ಕಲಿಯಲು ಮುಂದಾಗಿದ್ದದಾರೆ.

ಕೆಲ ಸಮಯದಿಂದ ಹಿಂದಿ ಶಿಕ್ಷಕರೊಬ್ಬರಿಂದ ಸೋಮಣ್ಣ ಭಾಷೆ ಕಲಿಯುತ್ತಿದ್ದಾರೆ . ಸ್ಪಷ್ಟವಾಗಿ ಹಿಂದಿ ಮಾತನಾಡಬೇಕು ಎಂದು ಪಣ ತೊಟ್ಟಿದ್ದಾರೆ. ಸಂಸತ್ ನಲ್ಲಾಗಲಿ, ಸಭೆಯಲ್ಲಾಗಲಿ, ಮಾಧ್ಯಮದ ಜೊತೆಯಾಗಲಿ. ನಿರರ್ಗಳವಾಗಿ ಹಿಂದಿ ಮಾತನಾಡಬೇಕು ಎಂದು ನಿರ್ಧರಿಸಿದ್ದಾರೆ. ಹೀಗಾಗಿ 6 ತಿಂಗಳೊಳಗೆ ಹಿಂದಿ ಭಾಷೆಯ ಮೇಲೆ ಹಿಡಿತ ಸಾಧಿಸಲು ಮುಂದಾಗಿದ್ದಾರೆ. ಬಿಡುವು ಸಿಕ್ಕಾಗ ಹಿಂದಿ ಪತ್ರಿಕೆ ಓದುತ್ತಿದ್ದಾರೆ, ಹಿಂದಿ ಸುದ್ದಿವಾಹಿನಿ, ಸಿನಿಮಾ ನೋಡುತ್ತಾರೆ ಎಂಬ ಮಾಹಿತಿ ದೊರೆತಿದೆ. ಅಚ್ಚ ಕನ್ನಡ ಮಾತನಾಡುವ ರಾಜ್ಯ ರೇಲ್ವೇ ಖಾತೆ ಸಚಿವ ವಿ ಸೋಮಣ್ಣ. ಕೆಲವೆ ದಿನಗಳಲ್ಲಿಹರಳು ಹುರಿದಂತೆ ಹಿಂದಿ ಮಾತನಾಡುವುದು ನಿಶ್ಚಿತವಾಗಿದೆ.

RELATED ARTICLES

Related Articles

TRENDING ARTICLES