Wednesday, October 9, 2024

ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಮಠಕ್ಕೆ ದಾನ ಮಾಡಿದ ಗಣಿ ಉದ್ಯಮಿ

ರಾಮನಗರ : ರಾಜಸ್ಥಾನದ ಗಣಿ ಉದ್ಯಮಿಯೊಬ್ಬ ತನ್ನ ಪಿತ್ರಾಜಿತ ಆಸ್ತಿಯನ್ನೆಲ್ಲ ಮಾಗಡಿ ತಾಲ್ಲೂಕಿನ ಪಾಲನಹಳ್ಳಿ ಮಠಕ್ಕೆ ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

78 ವರ್ಷದ ರಾಜಸ್ಥಾನದ ಗಣಿ ಉದ್ಯಮಿ ಪಿ.ಬಿ ಓಸ್ವಾಲ್‌ ಜೈನ್‌ ಆಸ್ತಿ ದಾನ ಮಾಡಿದ್ದು. ಪಾಲನಹಳ್ಳಿ ಮಠದ ಪೀಠಾಧ್ಯಕ್ಷರಾದ ಡಾ. ಸಿದ್ದರಾಜ ಸ್ವಾಮೀಜಿಗೆ ಆಸ್ತಿ‌ ಪತ್ರ ಹಸ್ತಾಂತರಿಸಿದ್ದಾರೆ. ಸುಮಾರು 3000 ಸಾವಿರ ಎಕರೆ ಭೂಮಿ ಮತ್ತು ತನ್ನ ಸಮಸ್ತ ಆಸ್ತಿಯನ್ನು ಮಠದ ಸ್ವಾದೀನಕ್ಕೆ ಕಾನೂನಾತ್ಮಕವಾಗಿ ಹಸ್ತಾಂತರಿಸಿದ್ದಾರೆ .

ಕಳೆದ 27 ವರ್ಷಗಳಿಂದ ಪಾಲನಹಳ್ಳಿ ಮಠದ ಜೊತೆ ಒಡನಾಟ ಹೊಂದಿರೋ ಉದ್ಯಮಿ. ತನ್ನ ಇಬ್ಬರು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ನೀಡಿ, ಸ್ವಯಾರ್ಜಿತ ಆಸ್ತಿ ಮಠಕ್ಕೆ ದಾನ ಮಾಡಿದ್ದಾರೆ. ಆಸ್ತಿ ಸ್ವೀಕರಿಸಿ ಸಮಾಜ ಸೇವೆಗೆ ಬಳಕೆ ಮಾಡಿಕೊಳ್ಳುವುದಾಗಿ ತಿಳಿಸಿರೋ ಡಾ. ಸಿದ್ದರಾಜ ಸ್ವಾಮೀಜಿ. ಮಠದ ನಿರ್ವಹಣೆ, ಶಾಲೆ, ಕಾಲೇಜು, ಆಸ್ಪತ್ರೆ, ಗೋಶಾಲೆ, ದೇಗುಲಗಳ ನಿರ್ಮಾಣಕ್ಕೆ ಬಳಕೆ. ಗಣಿ ಉದ್ಯಮಿ ನಡೆಗೆ ಪಾಲನಹಳ್ಳಿ ಮಠದ ಭಕ್ತರಿಂದ ಶ್ಲಾಘನೆ.

 

RELATED ARTICLES

Related Articles

TRENDING ARTICLES