Wednesday, October 9, 2024

ಮೂರನೇ ಬಾರಿಗೆ ಬಿಜೆಪಿಯ ಕೈ ಹಿಡಿದ ಹರಿಯಾಣದ ಮತದಾರ

ಹರಿಯಾಣದ ವಿಧಾನಸಬೆ ಚುನಾವಣೆಯ ಮತಎಣಿಕೆ ಕಾರ್ಯ ಬಹುತೇಕ ಮುಗಿದಿದ್ದು. ಬಿಜೆಪಿಮ ಮತ್ತೊಮ್ಮೆ ಸ್ಪಷ್ಟ ಬಹುಮತ ಪಡೆಯುವ ಮೂಲಕ ಅಧಿಕಾರಕ್ಕೆ ಬಂದಿದೆ. ದೆಹಲಿಯ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಕಾರ್ಯಕರ್ತರ ಸಂಬ್ರಮಾಚರಣೆ ಮುಗಿಲು ಮುಟ್ಟಿದ್ದು. ಇಂದು ಸಂಜೆ 7 ಗಂಟೆಗೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ದಶಕದ ಬಳಿಕ ಅಧಿಕಾರಕ್ಕೆ ಬರಲು ಹಂಬಲಿಸುತ್ತಿದ್ದ ಕಾಂಗ್ರೆಸ್​ಗೆ ಮತ್ತೇ ನಿರಾಸೆಯಾಗಿದ್ದು. ಮೂರನೇ ಬಾರಿಗೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಚುನಾವಣೋತ್ತರ ಸಮೀಕ್ಷಗಳ ಪ್ರಕಾರ ಈ ಬಾರಿ ಹರಿಯಾಣದಲ್ಲಿ ಸುಲಭ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ವರದಿ  ನೀಡಲಾಗಿತ್ತು. ಆದರೆ ಚುನಾವಣಾ ಫಲಿತಾಂಶ ಈ ಎಲ್ಲಾ ಸಮೀಕ್ಷೆಗಳ ನಂಬರ್​ಗಳನ್ನು ತಲೆಕೆಳಗೆ ಮಾಡಿವೆ.

ಮಧ್ಯಾಹ್ನದ 2 ಗಂಟೆಯ ಹೊತ್ತಿಗೆ ಫಲಿತಾಂಶ ಬಹುತೇಕ ಮುಕ್ತಾಯವಾಗಿದ್ದು ಬಿಜೆಪಿ-50 ಸ್ಥಾನ, ಕಾಂಗ್ರೆಸ-37 ಸ್ಥಾನ, ಜೆಜೆಪಿ- 3 ಸ್ಥಾನಗಳನ್ನು ಪಡೆದಿದ್ದು ಎಎಪಿ- 0 ಸ್ಥಾನಗಳನ್ನು ಪಡೆದಿವೆ. ಭಾರೀ ಕುತೂಹಲ ಮೂಡಿಸಿದ ಫಲಿತಾಂಶ ಹೊರಬಂದಿದ್ದು ಮತ್ತೇ ನಯಾಬ್ ಸಿಂಗ್ ಸೈನಿ ಸಿಎಂ ಸ್ಥಾನ ಅಲಂಕರಿಸಲಿದ್ದರೆ.

ಭಾರೀ ನೀರಿಕ್ಷೆ ಮೂಡಿಸಿದ್ದ ಜುಲಾನ ಕ್ಷೇತ್ರದ ಅಭ್ಯರ್ಥಿ ಕುಸ್ತಿಪಟು ವಿನೀಶ್ ಪೋಗಟ್ 6ಸಾವಿರ ಮತಗಳಿಂದ ಜಯಗಳಿಸಿದ್ದಾರೆ.

RELATED ARTICLES

Related Articles

TRENDING ARTICLES