Wednesday, October 16, 2024

ತಮ್ಮ ಪ್ರಾಣ ಕಳೆದುಕೊಂಡು ರೈತರ ಪ್ರಾಣ ಉಳಿಸಿದ ಕರಡಿಗಳು…

ಹಾಸನ : ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಕರಡಿಗಳು ಸಾವನ್ನಪ್ಪಿದ ಘಟನೆ ಅರಸೀಕೆರೆ ತಾಲ್ಲೂಕಿನ ಕಲ್ಲುಸಾದರಹಳ್ಳಿ ಗ್ರಾಮದಲ್ಲಿ ನಡೆದಿದೆ. ಭಾರಿ ಗಾಳಿ ಮಳೆಯಿಂದಾಗಿ ತುಂಡಾಗಿ ಬಿದ್ದ ವಿದ್ಯುತ್ ತಂತಿಯನ್ನು ತುಳಿದ 3 ಕರಡಿಗಳು ಸಾವನ್ನಪ್ಪಿವೆ.

ಆಹಾರ ಅರಸಿ ಕಾಡಿನಿಂದ ಬಂದು ರೈತರ ಜಮೀನಿನಲ್ಲಿ ಹಾದು ಹೋಗುತ್ತಿದ್ದಾಗ ಘಟನೆ ಘಟಿಸಿದೆ. ಓರ್ವ ರೈತನ ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದ ಗಂಡು ಕರಡಿ ಒದ್ದಾಡುವುದನ್ನು ನೋಡಿದ ಉಳಿದೆರಡು ಕರಡಿಗಳು ಗಾಬರಿಯಾಗಿ ಸ್ಥಳದಿಂದ ಓಡಿ ಹೋಗಿವೆ. ಪಕ್ಕ ಜಮೀನಿನಲ್ಲಿ ಓಡಿ ಹೋಗುವ ವೇಳೆ ಅಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದ ತಾಯಿ ಕರಡಿ ಮತ್ತು ಮರಿ ಕರಡಿಗಳು ಸಾವನ್ನಪ್ಪಿವೆ.

ಸಾವನ್ನಪ್ಪಿರು ಎರಡು ಕರಡಿಗಳು ಆರರಿಂದ ಏಳು ವರ್ಷದ ಕರಡಿಗಳಾಗಿದ್ದು. ಒಂದು ವರ್ಷದ ಮರಿ ಕರಡಿ ದುರ್ಘಟನೆಯಲ್ಲಿ ಸಾವನ್ನಪ್ಪಿವೆ. ಬೆಳಿಗ್ಗೆ ಜಮೀನಿಗೆ ಆಗಮಿಸಿದ ರೈತರು ವಿದ್ಯುತ್ ತಂತಿ ತುಂಡಾಗಿ ಕರೆಂಟ್ ಶಾಕ್‌ನಿಂದಲೇ ಕರಡಿಗಳು ಮೃತಪಟ್ಟಿವೆ ಎಂದು ದೃಡಪಡಿಸಿದ್ದಾರೆ. ಕೂಡಲೇ  ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಹಾಗೂ ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೆ ರೈತರು ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಅರಣ್ಯಾಧಿಕಾರಿಗಳು 3 ಕರಡಿಗಳ ಅಂತ್ಯಸಂಸ್ಕಾರ ಮಾಡಿದ್ದಾರೆ.

 

 

 

RELATED ARTICLES

Related Articles

TRENDING ARTICLES