Sunday, October 6, 2024

ಪಾಕ್ ಪ್ರಜೆಗಳು ಭಾರತಕ್ಕೆ ಬರಲು ಸಹಾಯ ಮಾಡಿದ್ದ ವ್ಯಕ್ತಿಯ ಬಂಧನ

ಬೆಂಗಳೂರು : ನಗರದಲ್ಲಿ ಪಾಕಿಸ್ತಾನಿ ಪ್ರಜೆಗಳ ಬಂಧನದ ಕುರಿತಾಗಿ ಹೆಚ್ಚಿನ ಮಾಹಿತಿ ದೊರೆತಿದ್ದು. ಪಾಕಿಸ್ತಾನಿ ಪ್ರಜೆಗಳು ಭಾರತಕ್ಕೆ ಬರಲು ನೆರವಾಗಿದ್ದ ಪರ್ವೇಜ್ ಎಂಬ ವ್ಯಕ್ತಿಯನ್ನು ಜಿಗಣಿ ಪೋಲಿಸರು ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಅನೇಕಲ್ ಮತ್ತು ದಾವಣಗೆರೆಯಲ್ಲಿ ಪಾಕ್ ಪ್ರಜೆಗಳನ್ನು ಬಂಧಿಸಿದ್ದು. ಇವರು ಭಾರತಕ್ಕೆ ಬರಲು ನೆರವು ನೀಡಿ ಮತ್ತು ಅವರಿಗೆ ಭಾರತೀಯ ದಾಖಲೆಯನ್ನು ಮಾಡಿಸಿ ಕೊಟ್ಟಿದ್ದ  ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದಾರೆ. ಈ ವ್ಯಕ್ತಿಯು ಮೆಹದಿ ಫೌಂಡೇಶನ್​ನಿನ ಉಸ್ತುವಾರಿಯಾಗಿದ್ದು.  ಈತ ಯೂನಸ್ ಅಲ್ಗೋರ್ ಎಂಬ ಧರ್ಮಗುರುವಿನ ಪ್ರವಚನಗಳನ್ನು ಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದನು.

ಬಂಧಿತರಾಗಿರುವ ಎಲ್ಲಾ ಪಾಕ್ ಪ್ರಜೆಗಳು ಈತನ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ದೊರೆತಿದ್ದು. ಸದ್ಯ ಪರ್ವೇಜ್​ನನ್ನು ಜಿಗಣಿ ಪೋಲಿಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಪರ್ವೇಜ್ ಸೇರಿದಂತೆ 8 ಮಂದಿ ಪಾಕಿಸ್ತಾನದ ಪ್ರಜೆಗಳನ್ನು ಬಂಧಿಸಿದ್ದು. ಇನ್ನು ಅನೇಕ ಪಾಕ್ ಪ್ರಜೆಗಳು ಪರ್ವೇಜ್​ನ ಸಂಪರ್ಕದಲ್ಲಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES