Sunday, October 6, 2024

ಸೈಬರ್ ವಂಚಕರಿಂದ ಹೊಸ ಮಾದರಿಯ ದಾಳಿ : ಗರ್ಭಿಣಿಯರ ಖಾತೆಗಳು ಹ್ಯಾಕ್!

ಬೆಳಗಾವಿ : ನಗರದಲ್ಲಿ ಹೊಸ ಮಾದರಿಯ ಸೈಬರ್ ದಾಳಿಗಳಾಗುತ್ತಿದ್ದು. ಬೆಳಗಾವಿಯಲ್ಲಿ ಎರಡೇ ದಿನಗಳಲ್ಲಿ 5 ಜನ ಗರ್ಭಿಣಿಯರ ಖಾತೆಗಳಿಗೆ ಕನ್ನ ಹಾಕಲಾಗಿದ್ದು ಸುಮಾರು 84 ಸಾವಿರ ಹಣವನ್ನು ದೋಚಿದ್ದಾರೆ. ಸದ್ಯ ವಂಚನೆಗೊಳಗಾದ ಮಹಿಳೆಯರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಅಧಿಕಾರಿಗಳು ಹೆಸರಿನಲ್ಲಿ ಮಹಿಳೆಯರಿಗೆ ಕರೆ ಮಾಡಿ ಅವರ ಹೆಸರು, ಅವರು ವಾಸಿಸುವ ಜಾಗದಲ್ಲಿರುವ ಅಂಗನವಾಡಿಯ ಹೆಸರನ್ನು ಹೇಳಿ. ನಿಮಗೆ ಕೇಂದ್ರ ಸರ್ಕಾರದ ವತಿಯಿಂದ 7500 ಹಣವನ್ನು ನಿಮ್ಮ ಖಾತೆಗೆ ಜಮಾವಣೆ ಮಾಡಬೇಕು ಎಂದು ಹೇಳುತ್ತಿದ್ದರು. ಇದಾದ ನಂತರ ಮಹಿಳೆಯರ ಮೊಬೈಲಿಗೆ ಲಿಂಕ್ ಕಳುಹಿಸಿ ಅವರ ಖಾತೆಯಲ್ಲಿಯ ಎಲ್ಲಾ ಹಣವನ್ನು ದೋಚಿದ್ದಾರೆ.

ಪೋಷನ್ ಟ್ರ್ಯಾಕರ್ ಎಂಬ ಆ್ಯಪ್​ನ್ನು ಹ್ಯಾಕ್ ಮಾಡಿ ಅದರಿಂದ ಗರ್ಭಿಣಿಯರು, ಬಾಣಂತಿಯರು ಮತ್ತು ಆರು ವರ್ಷದ ಒಳಗಿನ ಮಕ್ಕಳ ಡೇಟಾ ಕಳ್ಳತನ ಮಾಡಿದ್ದಾರೆ ಈ ಆ್ಯಪ್​ನಲ್ಲಿ ಅವರ ಹೆಸರು, ವಿಳಾಸ, ಸೇರಿದಂತೆ ಎಲ್ಲಾ ಮಾಹಿತಿಗಳು ದೊರೆತಿದ್ದು ಈ ಮಾಹಿತಿಯನ್ನು ಬಳಸಿಕೊಂಡು ಕೃತ್ಯ ನಡೆಸಲಾಗಿದೆ ಎಂದು ಊಹಿಸಲಾಗಿದೆ.

ಕೇವಲ ಎರಡೇ ದಿನಗಳಲ್ಲಿ 5ಜನ ಮಹಿಳೆಯರ ಖಾತೆಗಳನ್ನು ಹ್ಯಾಕ್ ಮಾಡಿದ್ದು. ಸುಮಾರು 85 ಸಾವಿರ ಹಣವನ್ನು ದೋಚಿದ್ದಾರೆ. ಹಣ ಕಳೆದುಕೊಂಡು ಕಂಗಾಲಾಗಿರುವ ಮಹಿಳೆಯರ ಕುಟುಂಬಸ್ಥರು ಸಿಇಎನ್  ಪೋಲಿಸರಿಗೆ ದೂರು ನೀಡಿದ್ದಾರೆ. ಐದು ಜನ ಬಾಣಂತಿಯರ ದೂರಗೆ ಒಂದೇ ಎಫ್ಐಆರ್​ ದಾಖಲಿಸಿ ತನಿಖೆ ಮಾಡುತ್ತಿದ್ದಾರೆ.

 

RELATED ARTICLES

Related Articles

TRENDING ARTICLES