ಬೆಂಗಳೂರು: ನೆನ್ನೆ(ಅ.05) ರಾತ್ರಿ ಬೆಂಗಳೂರಿನಲ್ಲಿ ಸುರಿದ ಬಾರಿ ಮಳೆಗೆ ಜನರು ತತ್ತರಿಸಿದ್ದು. ರಾತ್ರಿ ಸುರಿದ ಮಳೆಯಿಂದಾಗಿ ಯಲಹಂಕ ಕೇಂದ್ರಿಯ ವಿಹಾರ ಅಪಾರ್ಟ್ಮೆಂಟ್ನ ಪಾರ್ಕಿಂಗ್ ಜಾಗ ಮುಳುಗಡೆಯಾಗಿದ್ದು. ಮನೆಯಿಂದ ಜನರು ಹೊರೆಗೆ ಬರಲಾಗದೆ ಪರದಾಡಿದ್ದಾರೆ.
ಕಳೆದ ರಾತ್ರಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದ್ದು. ಸಂಜೆ ವೇಳೆಗೆ ಬಂದ ಮಳೆ ತಡ ರಾತ್ರಿಯವರೆಗೆ ಬಿಟ್ಟು ಬಿಡದಂತೆ ಸುರಿದಿದೆ. ಮಳೆಯಿಂದಾಗಿ ಬೆಂಗಳೂರಿನ ಅನೇಕ ರಸ್ತೆಗಳು ಜಲಾವೃತವಾಗಿದ್ದು ಅನೇಕ ಕಡೆ ಜನರು ಟ್ರಾಫಿಕ್ ದಟ್ಟಣೆಯಲ್ಲಿ ಸಿಲುಕಿ ಸಮಸ್ಯೆ ಅನುಭವಿಸಿದರು.
ಪ್ರತಿ ಬಾರಿಯಂತೆ ಬೆಂಗಳೂರಿನ ಯಲಹಂಕ ಬಳಿಯ ಕೇಂದ್ರಿಯ ವಿಹಾರ ಅಪಾರ್ಟ್ಮೆಂಟ್ ಮುಳುಗಡೆಯಾಗಿದ್ದು. ಅಪಾರ್ಟ್ಮೆಂಟಿನ ಕೆಳಮಹಡಿ ಸಂಪೂರ್ಣವಾಗಿ ಜಲಾವೃತವಾಗಿದ್ದು. ಪಾರ್ಕಿಂಗ್ನಲ್ಲಿ ನಿಲ್ಲಿಸಿದ ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ. ಜನರು ಮನೆಯಿಂದ ಹೊರಬರಲಾಗದೆ ಪರದಾಡುತ್ತಿದ್ದು. ಮನೆ ಕೆಲಸಗಾರರು ಮತ್ತು ಹಾಲು ಮಾರಾಟಗಾರರು ಮನೆ ಒಳಗೆ ಹೋಗಲು ಟ್ರ್ಯಾಕ್ಟರ್ ಬಳಕೆ ಮಾಡುತ್ತಿದ್ದಾರೆ.
ಸ್ಥಲದಲ್ಲಿಯೆ ಬೀಡುಬಿಟ್ಟಿರುವ ಅಗ್ನಿಶಾಮಕ ಸಿಬ್ಬಂದಿ ನೀರನ್ನು ಹೊರಹಾಕುವ ಕೆಲಸ ಮಾಡುತ್ತಿದ್ದು. ಜನರೇಟರ್ ಮೋಟಾರ್ ಬಳಸಿಕೊಂಡು ನೀರನ್ನು ಹೊರಗೆ ಹಾಕುವ ಕೆಲಸ ಮಾಡುತ್ತಿದ್ದಾರೆ.