Saturday, October 5, 2024

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದ ಗೃಹ ಸಚಿವ ಪರಮೇಶ್ವರ್

ಹುಬ್ಬಳ್ಳಿ : ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವ‌ರ್ ಜನರು ನಮ್ಮನ್ನು ನಂಬಿ ಜನ 136 ಸ್ಥಾನ ಕೊಟ್ಟಿದ್ದಾರೆ. ನಮ್ಮಸರ್ಕಾರ ಬಹಳ ಸುಭದ್ರವಾಗಿದೆ. ಜನರು ಬಡತನ ರೇಖೆಯಿಂದ ಮೇಲೆ ಬರಲಿ ಎಂದು ನಾವು ಅವರಿಗೆ 5 ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಈಗ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಮತ್ತು ಜೆಡಿಎಸ್​ನವರು ಟೀಕೆ ಮಾಡುತ್ತಿದ್ದಾರೆ. ಜನರಿಗೆ ಗ್ಯಾರಂಟಿ ಯೋಜನೆಗಳನ್ನು ತೆಗೆದುಕೊಳ್ಳಬೇಡಿ ಎಂದು ಹೇಳಲಿ ನೋಡೋಣ ಎಂದು ಹೇಳಿದರು.

ನಾವು ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. 15 ಬಜೆಟ್ ಮಂಡಿಸಿರುವ ಸಿದ್ದರಾಮಯ್ಯನವರಿಗೆ ಗ್ಯಾರಂಟಿ ನಿಭಾಯಿಸುವುದು ಕಷ್ಟವಲ್ಲ ಎಂದು ಹೇಳಿದರು. ಅಭಿವೃದ್ದಿ ಕಾರ್ಯವಾಗುತ್ತಿಲ್ಲ ಎಂದು ಹೇಳಿರುವ ಬಿಜೆಪಿಯವರು ಎಲ್ಲಾ ಇಲಾಖೆಯಲ್ಲಿ ಬಾಕಿ ಉಳಿಸಿ ಹೋಗಿದ್ದಾರೆ. ನಾವು ಅಭಿವೃದ್ದಿ ಕೆಲಸಗಳನ್ನು ನಿಲ್ಲಿಸದೆ ಅವುಗಳನ್ನು ಮಾಡುತ್ತಿದ್ದೇವೆ. ಬಹಳ ಮುಖ್ಯವಾಗಿ ನಮ್ಮ ಸರ್ಕಾರ ಸಬಲವಾಗಿದೆ ಮತ್ತು ದಲಿತರು ಮತ್ತು ಹಿಂದುಳಿದವರು ನಮ್ಮ ಶಕ್ತಿಯಾಗಿ ನಿಂತಿದ್ದಾರೆ ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯನವರ ವಿಷಯವಾಗಿ ಮಾತನಾಡಿದ ಪರಮೇಶ್ವರ್, ಸಿದ್ದ ರಾಮಯ್ಯನವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರ ಸರ್ಕಾರವಿದ್ದಾಗಲೆ ಸಿದ್ದರಾಮಯ್ಯನವರ ಪತ್ನಿಗೆ ಸೈಟ್ ನೀಡಲಾಗಿದೆ. ಅವಾಗ ನೀವು ಸೈಟ್ ಕೊಡುವುದಕ್ಕೆ ಆಗಲ್ಲ ಎಂದು ಹೇಳಬೇಕಿತ್ತು. ಅವಾಗ ಸೈಟ್ ಕೊಟ್ಟು ಇವಾಗ ಸಿದ್ದರಾಮಯ್ಯ ಪ್ರಭಾವ ಬೀರಿ ಸೈಟ್ ಪಡೆದಿದ್ಧಾರೆ ಎಂದು ಆರೋಪಿಸುತ್ತಿದ್ದೀರಿ ಎಂದು ಹೇಳಿದರು.,

ಸಿದ್ದರಾಮಯ್ಯನವರ ಪತ್ನಿ ಸೈಟ್ ವಾಪಾಸ್ ನೀಡಿದರು ಸಹ ಅದರಲ್ಲಿಯು ರಾಜಕೀಯ ಮಾಡುತ್ತೀರಿ. ನರೇಂದ್ರ ಮೋದಿಯವರುಸಹ ಈ ವಿಶಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದರ ವಿರುದ್ಧವಾಗಿ ಕಾಂಗ್ರೆಸ್ ಪದಾದಿಕಾರಿಗಳು ಮತ್ತು ಕಾರ್ಯಕರ್ತರೆಲ್ಲರು ಸೇರಿ ಸಮಾವೇಶ ಮಾಡುತ್ತೇವೆ ಮತ್ತು ಮೂಡಾ ಬಗ್ಗೆ ಜನರಿಗೆ ತಿಳಿಸುತ್ತೇವೆ. ಏಕೆಂದರೆ ಜನರು ಸದಾ ನಮ್ಮ ಜೊತೆ ನಿಂತಿದ್ದಾರೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES