Saturday, October 5, 2024

ಮೆಟ್ರೋ ಪ್ರಯಾಣಿಕರಿಗೆ ಶಾಕ್ ನೀಡಿದ BMRCL : ಟಿಕೆಟ್ ದರ ಹೆಚ್ಚಳ ಸಾಧ್ಯತೆ

ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣಿಕರಿಗೆ BMRCL ಶಾಕ್ ನೀಡಿದ್ದು. 8 ವರ್ಷಗಳ ಬಳಿಕ ಮೆಟ್ರೋ ಟಿಕೆಟ್ ದರ ಹೆಚ್ಚಿಸಲು ಮುಂದಾಗಿದೆ. ಮೆಟ್ರೋ ದರ ಹೆಚ್ಚಿಸಲು ಸಾರ್ವಜನಿಕರನ್ನು ಒಳಗೊಂಡ ಕಮಿಟಿ ನೇಮಿಸಲಾಗಿದ್ದು. ಸಾರ್ವಜನಿಕರ ಅಭಿಪ್ರಾಯ ಕಲೆ ಹಾಕಲಾಗುತ್ತಿದೆ ಎಂಬ ಮಾಹಿತಿ ದೊರೆತಿದೆ.

ಮಾಧ್ಯಮದವರಿಗೆ ಮಾಹಿತಿ ನೀಡಿರುವ ನಮ್ಮ ಮೆಟ್ರೋ ಅಧಿಕಾರಿಗಳು ಈಗಾಗಲೇ ಸಾರ್ವಜನಿಕ ಅಭಿಪ್ರಾಯ ನಮ್ಮ ಬಳಿ ಇದೆ. ಅದನ್ನ ಮುಂದೆ ಇಟ್ಟುಕೊಂಡು ಬೆಲೆ ಇಷ್ಟ್ಟು ಏರಿಕೆ ಮಾಡಬೇಕು ಎಂಬ ನಿರ್ಧಾರ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

2017ರ ನಂತರ ಇಲ್ಲಿಯವರೆಗೆ ಮೆಟ್ರೋ ದರ ಹೇರಿಕೆ ಮಾಡಿಲ್ಲ. ಆದ್ದರಿಂದ ಎಷ್ಟು ದರ ಹೇರಿಕೆ ಮಾಡಬೇಕು ಎಂದು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಈ ಅಭಿಪ್ರಾಯವನ್ನು ಮುಂದೆ ಇಟ್ಟುಕೊಂಡು ಎಷ್ಟು ಹೆಚ್ಚು ಮಾಡಬೇಕು ಎಂದು ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.

ಹಾಲಿ ನಮ್ಮ ಮೆಟ್ರೋದ ಕನಿಷ್ಟ ಟಿಕೆಟ್ ದರ 10₹ ಇದ್ದು, ಗರಿಷ್ಟ ದರ 60₹ ಇದೆ. ಈಗ 15 ರಿಂದ 20 ರಷ್ಟು ದರ ಹೇರಿಕೆ ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ಹಿರಿಯ ನ್ಯಾಯಧೀಶರು, ಹಿರಿಯ ಅಧಿಕಾರಿಗಳನ್ನೊಳಗೊಂಡ ಕಮಿಟಿ ರಚಿಸಲಾಗಿದ್ದು. ಇವರ ವರದಿ ಆಧಾರದ ಮೇಲೆ ಬೆಲೆ ಏರಿಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

 

RELATED ARTICLES

Related Articles

TRENDING ARTICLES