Saturday, October 5, 2024

ರಂಪಾಟ ಮಾಡಿದ ಹಿರಣ್ಯಾ ಆನೆ : ಶ್ರೀರಂಗ ಪಟ್ಟಣ ದಸರಾದಲ್ಲಿ ಆತಂಕದ ವಾತವರಣ ನಿರ್ಮಾಣ

ಮೈಸೂರು : ಶ್ರೀ ರಂಗಪಟ್ಟಣ ದಸರಾಗೆ ಆಗಮಿಸಿರುವ ಹಿರಣ್ಯಆನೆ  ಬೆದರಿ, ಮನಸ್ಸೋ ಇಚ್ಛೆ ಅಡ್ಡಾದಿಡ್ಡಿ ಓಡಾಡಿದೆ. ಆನೆಯ ರಂಪಾಟಕ್ಕೆ ಜನರು ದಿಕ್ಕಾಪಾಲಾಗಿ ಓಡಿದ್ದು. ಮಾವುತರು ಮತ್ತು ಕಾವಾಡಿಗರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ .

ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ 3 ದಸರಾ ಆನೆಗಳು ಆಗಮಿಸಿದ್ದು. ನೆನ್ನೆಯಷ್ಟೆ ಮೂರು ಆನೆಗಳು ಶ್ರೀ ರಂಗಪಟ್ಟಣಕ್ಕೆ ಆಗಮಿಸಿವೆ. ಮಹೇಂದ್ರ ಆನೆಯು ಅಂಬಾರಿ ಆನೆಯಾಗಿದ್ದು ಲಕ್ಷ್ಮಿ ಮತ್ತು ಹಿರಣ್ಯ ಆನೆಗಳೂ ಕುಮ್ಕಿ ಆನೆಗಳಾಗಿವೆ ಹೆಜ್ಜೆಯಾಕುತ್ತಿದ್ದವು.

ಶ್ರೀರಂಗಪಟ್ಟಣ ಮಿನಿ ವಿಧಾನಸೌಧದ ಬಳಿ ಘಟನೆಯಾಗಿದ್ದು. ಬನ್ನಿಮಂಟಪದಿಂದ ರಂಗನಾಥ ಮೈದಾನದವರೆಗೆ ಅಂಬಾರಿ ಜೊತೆ ಹೆಜ್ಜೆ ಹಾಕುವಾಗ. ಸಹ ಆನೆಗಳ ಚಿತ್ರಾಲಂಕಾರವನ್ನು ನೋಡಿ ಹಿರಣ್ಯ ಆನೆಯು ಹೆದರಿದೆ ಎಂಬ ಮಾಹಿತಿ ದೊರೆತಿದೆ. ತಕ್ಷಣ ಎಚ್ಚೆತ್ತ ಕಾವಾಡಿಗರು ಆನೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಆನೆಯ ರಂಪಾಟದಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ರಂಪಾಟ ಮಾಡಿದ ಹಿರಣ್ಯ ಆನೆಯ ಮೇಲೆ ಮಾವುತರು, ಕಾವಾಡಿಗರು ಮತ್ತು ಅರಣ್ಣಾಧಿಕಾರಿಗಳು ತೀವ್ರ ನಿಗಾವಹಿಸಿದ್ದು. ಹಿರಣ್ಯಾ ಆನೆಯ ಕಾಲಿಗೆ ಕಬ್ಬಿಣದ ಸರಪಳಿ ಕಟ್ಟಿ ಎಚ್ಚರವಹಿಸಲಾಗಿದೆ.

 

 

RELATED ARTICLES

Related Articles

TRENDING ARTICLES