Saturday, October 5, 2024

ಮೂಡಾ ಹಗರಣವನ್ನು ಚಿತ್ರೀಕರಿಸುತ್ತೇವೆ: ಲೀಡರ್ ರಾಮಯ್ಯ ಚಿತ್ರತಂಡದಿಂದ ಸ್ಪಷ್ಟನೆ

ಕೊಪ್ಪಳ : ಸಿದ್ದರಾಮಯ್ಯನವರ ಜೀವನಾಧಾರಿತ ಚಲನಚಿತ್ರವಾದ ಲೀಡರ್ ರಾಮಯ್ಯ ಚಿತ್ರದ ಬಗ್ಗೆ ಚಿತ್ರದ ನಿರ್ಮಾಪಕ ಹಯಾತ್ ಪೀರ್ ಮಾಹಿತಿ ನೀಡಿದ್ದು. ಮೂಡ ಪ್ರಕರಣದಿಂದ ಚಿತ್ರದ ಚಿತ್ರೀಕರಣ ನಿಲ್ಲಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಸಿದ್ಧರಾಮಯ್ಯನವರ ಜೀವನಾಧಾರಿತ ಚಿತ್ರವಾದ ಲೀಡರ್ ರಾಮಯ್ಯ ಚಿತ್ರದ ಶೇಕಡಾ 40 ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು. ಸಿದ್ದರಾಮಯ್ಯನವರ ಬಾಲ್ಯವನ್ನುಮತ್ತು ಅವರ ಕಾಲೇಜು ದಿನಗಳನ್ನು  ಚಿತ್ರೀಕರಿಸಲಾಗಿದೆ. ಸಿದ್ದರಾಮಯ್ಯನವರ ಪಾತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ಅಭಿನಯಿಸಲಿದ್ದು ಅವರ ಡೇಟ್ಸ್​ಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಶೀಘ್ರದಲ್ಲಿಯೆ ವಿಜಯ ಸೇತುಪತಿ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಲೀಡರ್ ರಾಮಯ್ಯ ಚಿತ್ರದಲ್ಲಿ ಮೂಡಾ ಹಗರಣವನ್ನು ಚಿತ್ರೀಕರಿಸಲಾಗುತ್ತದೆ. 2nd ಹಾಫ್​ನಲ್ಲಿ ಮೂಡಾ ಹಗರಣದ ಕುರಿತಾದ ಘಟನಾವಳಿಗಳನ್ನು ಚಿತ್ರೀಕರಿಸುತ್ತೇವೆ ಮತ್ತು ಆರೋಪಮುಕ್ತರಾಗಿ ಬರೋ ದೃಶ್ಯವನ್ನು ಸೆರೆಹಿಡಿಯಲು ಚಿತ್ರ ತಂಡ ಸಿದ್ದತೆ ನಡೆಸುತ್ತಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ 2025ರ ಆಗಸ್ಟ್ 3ರಂದು ಚಿತ್ರವನ್ನು ತೆರೆ ಮೇಲೆ ತರಲಾಗುತ್ತದೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES