Saturday, October 5, 2024

ನಾಗಸಂದ್ರ TO ಮಾದವಾರ ನಡುವಿನ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ ಸುರಕ್ಷತಾ ಆಯುಕ್ತರು

ಬೆಂಗಳೂರು : ತುಮಕೂರು ರಸ್ತೆ ಪ್ರಯಾಣಿಕರಿಗೆ BMRCL ಗುಡ್ ನ್ಯೂಸ್ ಕೊಟ್ಟಿದ್ದು. ನಾಗಸಂದ್ರದಿಂದ ಮಾದಾವರ ನಡುವಿನ ಮಾರ್ಗದ ಕೆಲಸ ಮುಕ್ತಾಯಗೊಂಡಿದೆ. ನೆನ್ನೆ (ಅ.03) ನೂತನ ಮಾರ್ಗದಲ್ಲಿ ಸುರಕ್ಷತಾ ಆಯುಕ್ತರು ಬೇಟಿ ನೀಡಿ ಪರಿಶೀಲನೆ ಪಡೆಸಿದ್ದು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ನೂತನ ಮಾರ್ಗವು ಬೆಂಗಳೂರು ಅಂತರ್ ರಾಷ್ಟ್ರೀಯ ಪ್ರದರ್ಶನ ಕೇಂದ್ರಕ್ಕೆ ತೆರಳುವ ಪ್ರಯಾಣಿಕರಿಗೆ ಹೆಚ್ಚು ಸಹಾಯಕವಾಗಿದ್ದು. ಈ ಮಾರ್ಗವು ಮಂಜುನಾಥ ನಗರ, ಚಿಕ್ಕ ಬಿದರುಕಲ್ಲು ಮತ್ತು ನಾಗವಾರ  ಮಾರ್ಗದಲ್ಲಿ ಸಂಚರಿಸುವ ಜನರನ್ನು ಟ್ರಾಫಿಕ್ ದಟ್ಟಣೆಯಿಂದ ಪಾರು ಮಾಡುತ್ತದೆ.

ಪ್ರಯಾಣಿಕರ ಸಂಚಾರಕ್ಕಾಗಿ ಮಾರ್ಗ ಸುರಕ್ಷಿತವಾಗಿದೆಯೇ ಎಂಬುದರ ಕುರಿತು ಪರಿಶೀಲನೆ ಮಾಡಿದ ರೈಲ್ವೆ ಸುರಕ್ಷಿತ ಆಯುಕ್ತರು ರೈಲಿನ ವೇಗ, ತಿರುವುಗಳು, ವಿದ್ಯುತ್ ಪ್ರವಹಿಸುವಿಕೆ, ರೈಲುನಿಲ್ದಾಣದ ಮೂಲ ಸೌಕರ್ಯ ಮತ್ತು ಸುರಕ್ಷತೆ ಬಗ್ಗೆ ಪರಿಶೀಲನೆ ಮಾಡಿದ್ದಾರೆ.

ಎಲ್ಲಾ ಪರಿಶೀಲನೆಯ ನಂತರ ರೈಲ್ವೆ ಸುರಕ್ಷತಾ ಆಯುಕ್ತರು ನಾಗಸಂದ್ರ To ಮಾದಾವರ ನಡುವೆ ವಾಣಿಜ್ಯ ಸಂಚಾರ ಆರಂಭಿಸಲು ಅನುಮತಿ ನೀಡಿದ್ದು. ಕೆಲವೇ ದಿನಗಳಲ್ಲಿ ರೈ,ಲು ಸಂಚಾರ ಆರಂಭವಾಗುತ್ತದೆ ಎಂಬ ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES