Saturday, October 5, 2024

ಇಂದಿನಿಂದ ಗ್ರಾಮಪಂಚಾಯತಿ ಕಾರ್ಯಾಲಯ ಬಂದ್ : ಹೋರಾಟಕ್ಕಿಳಿದ ಸಿಬ್ಬಂದಿಗಳು

 

ಬೆಂಗಳೂರು : ವಿವಿಧ ಬೇಡಿಕೆಗಳಗೆ ಆಗ್ರಹಿಸಿ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಸಿಬ್ಬಂದಿಗಳು ಅನಿರ್ದಿಷ್ಟವದಿ ಹೋರಾಟ ಕೈಗೊಂಡಿದ್ದು ಇಂದಿನಿಂದ (ಅ.04) ಗ್ರಾಮಪಂಚಾಯಿತಿಯ ಎಲ್ಲಾ ಸೇವೆಗಳು ಸ್ಥಗಿತವಾಗಲಿದೆ.

ಗ್ರಾ.ಪಂ ಸದಸ್ಯರು ಹಾಗೂ ಸಿಬ್ಬಂದಿಯಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟ ಹೋರಾಟ ಕೈಗೊಂಡಿರುವ ಹಿನ್ನಲೆಯಲ್ಲಿ ಗ್ರಾಮಪಂಚಾಯಿತಿಯ ಎಲ್ಲಾ ಗ್ರೇಡ್​ನ ಸಿಬ್ಬಂದಿಗಳು ಹೋರಾಟ ಕೈಗೊಂಡಿದ್ದು. ಪಿಡಿಓ, ಕಾರ್ಯದರ್ಶಿ ಗ್ರೇಡ್ 1ಮತ್ತುಗ್ರೇಡ್2ನೌಕರರು, ಲೆಕ್ಕ ಸಹಾಯಕರು, ಕರ ವಸೂಲಿ ಸಿಬ್ಬಂದಿ, ಡಾಟಾ ಎಂಟ್ರಿ ಆಪರೇಟರ್ ಸೇರಿ ಎಲ್ಲ ಸಿಬ್ಬಂದಿ ಧರಣಿ ನಿರತರಾಗಿದ್ದಾರೆ.

ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಅಧ್ಯಕ್ಷರು ಕೂಡ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು. ಬೇರೆ ತಾಲೂಕಿಗೆ ವರ್ಗಾವಣೆಗೆ ವಿರೋಧ, ಪಿಡಿಓಗಳನ್ನು ಗೆಜೆಟೆಡ್ ಬಿ ದರ್ಜೆಗೆ ಆಗ್ರಹ ಜೇಷ್ಠತಾಪಟ್ಟಿ ಹಾಗೂ ಬಡ್ತಿ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯ. ಈ ರೀತಿಯ ಹಲವಾರು ಬೇಡಿಕೆ ಈಡೇರಿಸುವಂತೆ ಕೋರಿ ತಮ್ಮ ಕೆಲಸಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಇಳಿದಿದ್ದಾರೆ.

 

 

 

RELATED ARTICLES

Related Articles

TRENDING ARTICLES