Saturday, October 5, 2024

ಖಾಸಗಿ ದರ್ಬಾರ್ ಆರಂಭ : ಮೈಸೂರಿನಲ್ಲಿ ಕಳೆಗಟ್ಟಿದ ನಾಡಹಬ್ಬ ದಸರಾ.

ಮೈಸೂರು : ನವರಾತ್ರಿ ಹಿನ್ನಲೆ ಮೈಸೂರಿನಲ್ಲಿ ದಸರಾ ಸಡಗರ ಮನೆ ಮಾಡಿದ್ದು. ಯದುವಂಶದ ಖಾಸಗಿ ದರ್ಬಾರ್ ಆರಂಭವಾಗಿದೆ. ಮೈಸೂರು ಅರಮನೆ ಅಂಬಾವಿಲಾಸದಲ್ಲಿ ಖಾಸಗಿ ದರ್ಬಾರ ಕಳೆಗಟ್ಟಿದ್ದು. ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಅವರಿಂದ ಖಾಸಗಿ ದರ್ಬಾರ್ ಆರಂಭವಾಗಿದೆ.

ಶರನ್ನವರಾತ್ರಿಯ ಶುಭಾರಂಭದ ದಿನ ಖಾಸಗಿ ದರ್ಬಾರ್ ಆರಂಭವಾಗಿದ್ದು. ರಾಜಮನೆತನಮದಲ್ಲಿ ಸಂಭ್ರಮ ಮನೆಮಾಡಿದೆ. ಬೆಳಿಗ್ಗೆ ಮೊದಲಿಗೆ ಎಣ್ಣೆ ಶಾಸ್ತ್ರ ಕಾರ್ಯ ಆರಂಭವಾಗಿದ್ದು. ಬೆಳಿಗ್ಗೆ 5.45 ರಿಂದ 6.10 ರ ಒಳಗಿನ ಶುಭ ಮುಹೂರ್ತದಲ್ಲಿ ರತ್ನಖಚಿತ ಸಿಂಹಾಸನಕ್ಕೆ ಸಿಂಹದ ಮುಖ ಜೋಡಣೆಯಾಗಿತ್ತದೆ.

7.45 ರಿಂದ 8.45 ರ ಶುಭ ಮುಹೂರ್ತದಲ್ಲಿ ಚಾಮುಂಡಿ ತೊಟ್ಟಿಯಲ್ಲಿ ಯದುವಂಶದ ಮಹಾರಾಜ ಯದುವೀರ್ ಗೆ ಕಂಕಣಧಾರಣೆಯಾಗಲಿದ್ದು. ಬೆಳಿಗ್ಗೆ 10.30 ಕ್ಕೆ ಸವಾರಿ ತೊಟ್ಟಿಗೆ ಪಟ್ಟದ ಆನೆ, ಕುದುರೆ, ಹಸುಗಳ ಆಗಮನವಾಗಲಿದೆ.

ನಂತರ ಬೆಳಿಗ್ಗೆ 11ಕ್ಕೆ ಮಹರಾಜ ಯದುವೀರ್ ಅವರಿಂದ ಕಳಸ ಪೂಜೆ ಮತ್ತು ಸಿಂಹಾಸನ ಪೂಜೆ ನಡೆದು. 11.35 ರಿಂದ 12.05 ರ ಒಳಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನಾರೋಹಣ ಮಾಡುವ ಮೂಲಕ ಖಾಸಗಿ ದರ್ಬಾರ್ ಆರಂಭವಾಗುತ್ತದೆ. ಮಧ್ಯಾಹ್ನ 1.05 ರಿಂದ 1.30 ರ ಒಳಗೆ ಮೈಸೂರು ಅರಸರ ಕುಲದೇವತೆಯಾಗಿರುವ ಚಾಮುಂಡೇಶ್ವರಿ ಅಮ್ಮನವರ ಮೂರ್ತಿಯನ್ನು ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ತರಲಾಗುತ್ತದೆ.

RELATED ARTICLES

Related Articles

TRENDING ARTICLES