Sunday, October 6, 2024

ಡಬ್ಬಾ ಓಲಾ ಸ್ಕೂಟರ್​ನಿಂದ ನಿಮ್ಮ ಜೀವನ ಗೋಳು: ಕನ್ನಡಿಗರು ಖರೀದಿಸದಂತೆ ಗ್ರಾಹಕನ ಮನವಿ!

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬೇಡಿಕೆ ಹೆಚ್ಚಾಗುತ್ತಿದೆ. ಹಲವು ಇವಿ ಸ್ಕೂಟರ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಪೈಕಿ ಓಲಾ ಕೂಡ ಒಂದು. ಆದರೆ ಓಲಾ ಖರೀದಿಸಿದ ಗ್ರಾಹಕರ ಪರ ವಿರೋಧ ಅಭಿಪ್ರಾಯ ವ್ಯಕ್ತಪಡಿಸುತ್ತಲೇ ಇದ್ದಾರೆ. ಸಾಕಷ್ಟು ಮಂದಿ ಓಲಾ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸದ್ಯ ಇದೀಗ ಓಲಾ ಖರೀದಿಸಿದ ಗ್ರಾಹಕನೊಬ್ಬ ಬೇಸತ್ತು ಕನ್ನಡಿಗರಿಗೆ ಸಂದೇಶ ರವಾನಿಸಿದ್ದಾನೆ. ತನ್ನ ಓಲಾ ಸ್ಕೂಟರ್ ಮುಂದೆ ಈ ಮನವಿ ಸಂದೇಶ ಅಂಟಿಸಿ ತಿರುಗಾಡುತ್ತಿದ್ದಾನೆ. ಪ್ರಿಯ ಕನ್ನಡಿಗರೆ, ಓಲಾ ಒಂದು ಡಬ್ಬಾ ಗಾಡಿ. ದಯವಿಟ್ಟು ತಗೋಳಬೇಡಿ. ಓಲಾ ತಗೊಂಡ್ರೆ ನಿಮ್ಮ ಜೀವನ ಗೋಳು. ದಯವಿಟ್ಟು ಖರೀದಿಸಬೇಡಿ ಇಂತಿ ಅಸಮಧಾನಿತ ಓಲಾ ಗ್ರಾಹಕ ಎಂದು ನಿಶಾ ಗೌರಿ ಅನ್ನೋ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಓಲಾ ಇವಿ ಸ್ಕೂಟರ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಮನವಿ ಮಾಡುತ್ತಿರುವಾದಿಗಿ ಎಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ.

ಇಷ್ಟಕ್ಕೇ ಈ ಗ್ರಾಹಕನ ಹೋರಾಟ ನಿಂತಿಲ್ಲ. ಗ್ರಾಹಕರ ವೇದಿಕೆ ಮೂಲಕ ಓಲಾ ಕಂಪನಿ ವಿರುದ್ಧ ಕಾನೂನು ಹೋರಾಟ ಆರಂಭಿಸಿದ್ದಾನೆ. ಇದೀಗ ಒಲಾಗೆ ಗ್ರಾಹಕರ ವೇದಿಕೆ ಕಮಿಷನ್ ನೋಟಿಸ್ ನೀಡಿದೆ. ಓಲಾ ಸ್ಕೂಟರ್ ಸಮಸ್ಯೆ, ಸರ್ವೀಸ್ ನಿರ್ಲಕ್ಷ್ಯ, ಸಿಬ್ಬಂದಿಗಳ ನಿರ್ಲಕ್ಷ್ಯಗಳ ಕುರಿತು ಹೋರಾಟ ತೀವ್ರಗೊಂಡಿದೆ.

ಇತ್ತೀಚೆಗೆ ಓಲಾ ಗ್ರಾಹಕನೊಬ್ಬ ಸ್ಕೂಟರ್ ರಿಪೇರಿ ಮಾಡಿಕೊಡುತ್ತಿಲ್ಲ. ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ, ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿ ಓಲಾ ಶೋ ರೂಂಗೆ ಬೆಂಕಿ ಇಟ್ಟ ಘಟನೆ ಕಲಬುರಗಿಯಲ್ಲಿ ನಡೆದಿತ್ತು. ಓಲಾ ವಿರುದ್ದ ದೂರು, ಅಸಮಾಧಾನಗೊಂಡಿರುವರ ಸಂಖ್ಯೆ ಹೆಚ್ಚುತ್ತಿದೆ. ಈ ಪೋಸ್ಟ್‌ಗೆ ಹಲವರು ಕಮೆಂಟ್ ಮಾಡಿದ್ದಾರೆ. ಬಹುತೇಕರು ಓಲಾ ವಿರುದ್ದ ಅಸಮಾಧಾನ ತೋಡಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES