Sunday, October 6, 2024

ಅಸ್ಸಾಂನಲ್ಲಿ ಪ್ರವಾಹ; ಕಾಜಿರಂಗ ಪಾರ್ಕ್‍ನಲ್ಲಿ 131 ವನ್ಯಜೀವಿಗಳು ಸಾವು

ಅಸ್ಸಾಂನಲ್ಲಿ ಭೀಕರ ಪ್ರವಾಹ ಉಂಟಾಗಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಸುಮಾರು 131 ಪ್ರಾಣಿಗಳು ಸಾವಿಗೀಡಾಗಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 25 ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 52 ವನ್ಯಜೀವಿಗಳಿಗೆ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ನೌಕರರು ವನ್ಯಜೀವಿಗಳ ರಕ್ಷಣೆಗಾಗಿ ಗಸ್ತು ಬೋಟ್‍ಗಳ ಮೂಲಕ ಹುಡುಕಾಟ ನಡೆಸುತ್ತಿದ್ದಾರೆ. ಈ ಮೂಲಕ ವನ್ಯಜೀವಿಗಳ ರಕ್ಷಣೆಗಾಗಿ ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ‘ನಾನು ಬಾಸ್​​​ ಎನ್ನುವುದು ಇಬ್ಬರಿಗೆ ಮಾತ್ರ’-ನಟ ಸುದೀಪ್

85 ಹಂದಿ, ಜಿಂಕೆ, ಎರಡು ಖಡ್ಗಮೃಗ, ಗೂಬೆ, ಮೊಲ, ಆನೆ ಮತ್ತು ಕಾಡು ಬೆಕ್ಕುಗಳನ್ನು ಅಧಿಕಾರಿಗಳು ರಕ್ಷಿಸಿದ್ದಾರೆ ಎನ್ನಲಾಗಿದೆ. ಸತ್ತ ಪ್ರಾಣಿಗಳಲ್ಲಿ 6 ಘೇಂಡಾಮೃಗಗಳು, 117 ಜಿಂಕೆಗಳು ಸೇರಿವೆ. ಇದರಲ್ಲಿ 98 ನೀರಿನಲ್ಲಿ ಮುಳುಗಿ, ಚಿಕಿತ್ಸೆಯ ಸಮಯದಲ್ಲಿ 25 ವನ್ಯಜೀವಿಗಳು ಸಾವನ್ನಪ್ಪಿವೆ.

RELATED ARTICLES

Related Articles

TRENDING ARTICLES