ಅಸಹಾಯಕ ಅಪ್ರಾಪ್ತೆಯ ಮೇಲೆರಗಿ ಕೀಚಕ ‘ಪಾಸ್ಟರ್’ ಒಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ತಮಿಳುನಾಡಿನ ಕಂಚೀಪುರಂ ನಗರದಲ್ಲಿ ಈ ದಾರುಣ ಘಟನೆ ನಡೆದಿದೆ. ಪೋಕ್ಸೋ ಕಾಯ್ದೆ ಅಡಿಯಲ್ಲಿ 54 ವರ್ಷದ ಚರ್ಚ್ ಪಾಸ್ಟರ್ ಎಸ್.ದೇವೈರಕ್ಕಂ ಎಂಬಾತನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ದೌರ್ಜನ್ಯಕ್ಕೆ ಒಳಗಾಗಿರುವ ಕೇವಲ 14 ವರ್ಷದ ಅಪ್ರಾಪ್ತೆಯು ಸಿಎಸ್ಐ ಚರ್ಚ್ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.
ಅಪ್ರಾಪ್ತೆಯ ತಾಯಿ ಕೆಲವು ತಿಂಗಳ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಅದಾದ ಬಳಿಕ ಅಪ್ರಾಪ್ತೆಯು ಚರ್ಚ್ ಆವರಣದಲ್ಲೇ ವಾಸವಾಗಿದ್ದು, ತನ್ನ ವಿದ್ಯಾಭ್ಯಾಸ ಮುಂದುವರೆಸಿದ್ದಳು. ಈ ಸಂದರ್ಭದಲ್ಲಿ ಪಾಸ್ಟರ್ ದೇವೈರಕ್ಕಂ ಅಪ್ರಾಪ್ತೆಯ ಜೊತೆ ಸಲುಗೆ ಬೆಳೆಸಿ, ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ.
ಇದನ್ನೂ ಓದಿ: ಅಯ್ಯೋ ಭೂ ಸಮಾಧಿ! ಕೆಲವೇ ಅಡಿಗಳ ದೂರದಲ್ಲಿ ‘ಗುಡ್ಡದ ಭೂತ’!
ಈತನ ಕೀಚಕ ಕೃತ್ಯದ ಬಗ್ಗೆ ಮಾಹಿತಿ ಸಿಗುತ್ತಲೇ ಸ್ಥಳೀಯರು ಎಚ್ಚೆತ್ತುಕೊಂಡಿದ್ದರು. ಪಾಸ್ಟರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ತಮಿಳುನಾಡು ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದ್ದರು. ವಿಷಯ ಗಂಭೀರವಾಗಿ ಪರಿಗಣಿಸಿರುವ ಸಿಎಂ ಕೂಡಲೇ ವಿಶೇಷ ತನಿಖೆಗೆ ಆಗ್ರಹಿಸಿದ್ದರು. ಕಂಚೀಪುರಂ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ಸದಸ್ಯರು ನೀಡಿದ ವರದಿ ಆಧರಿಸಿ, ಇದೀಗ ಪಾಸ್ಟರ್ ಅರೆಸ್ಟ್ ಮಾಡಿ ತನಿಖೆ ಕೈಗೊಳ್ಳಲಾಗಿದೆ.