Sunday, October 6, 2024

ಥಾಣೆಯಲ್ಲಿ ಮಳೆಗೆ ಮನೆಗಳು ಜಲಾವೃತ: 54 ಜನರ ರಕ್ಷಣೆ

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಭಾರೀ ಮಳೆಯಾಗಿದ್ದು, ಧಾರಕಾರ ಮಳೆಗೆ ಹಲವು ಮನೆಗಳು ಜಲಾವೃತಗೊಂಡಿವೆ. ಜಲಾವೃತಗೊಂಡ ಮನೆಯಲ್ಲಿದ್ದ 54 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: ಅಯ್ಯೋ ಭೂ ಸಮಾಧಿ! ಕೆಲವೇ ಅಡಿಗಳ ದೂರದಲ್ಲಿ ‘ಗುಡ್ಡದ ಭೂತ’!

ಭಾನುವಾರ ಸುರಿದ ಭಾರಿ ಮಳೆಗೆ ವಿವಿಧ ಪ್ರದೇಶಗಳಲ್ಲಿ ಕನಿಷ್ಠ 275 ಮನೆಗಳು ಹಾನಿಗೊಳಗಾಗಿವೆ. ಸುಮಾರು 20 ವಾಹನಗಳು ನೀರಿನಲ್ಲಿ ಮುಳುಗಿವೆ. ಸೇತುವೆಯೊಂದು ಕೊಚ್ಚಿಹೋಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ. ಇಂದು ನಗರದಲ್ಲಿ 4.6 ಸೆಂ.ಮೀ ಮಳೆಯಾಗಿದೆ. ನಗರದಲ್ಲಿ ಜೂನ್ 1 ರಿಂದ ಇದುವರೆಗೆ 85.88 ಸೆಂ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 91.79 ಸೆಂ.ಮೀ ಮಳೆಯಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ. ಶಹಾಪುರದ ಗೋತೇಫರ್ ಪ್ರದೇಶದ ವಾಫಾ ನರ್ಸರಿ ಪ್ರದೇಶಕ್ಕೆ ನೀರು ನುಗ್ಗಿದ್ದು. 3 ಮನೆಗಳಲ್ಲಿದ್ದ 38 ಮಂದಿಯನ್ನು ರಕ್ಷಿಸಲಾಗಿದೆ. ವಶಿಂದ್ ಪ್ರದೇಶದಲ್ಲಿ 125 ಮನೆಗಳು ಜಲಾವೃತಗೊಂಡಿದ್ದು. ಇಲ್ಲಿಂದ 12 ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಭಾರಿ ಮಳೆಯಿಂದಾಗಿ ಅಟ್ಟಾಂವ್‌ನಲ್ಲಿ ರೈಲ್ವೆ ಹಳಿಗಳ ಪಕ್ಕದಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿದೆ. ಶಹಾಪುರದಲ್ಲಿ ಸುಮಾರು 12 ಮನೆಗಳು ಭಾಗಶಃ ಕುಸಿದಿವೆ ಎಂದು ತಿಳಿದುಬಂದಿದೆ.

RELATED ARTICLES

Related Articles

TRENDING ARTICLES