Sunday, October 6, 2024

ಅಯ್ಯೋ ಭೂ ಸಮಾಧಿ! ಕೆಲವೇ ಅಡಿಗಳ ದೂರದಲ್ಲಿ ‘ಗುಡ್ಡದ ಭೂತ’!

ಈ ದೃಶ್ಯ ನೋಡಿದ್ರೆ ನೀವು ಖಂಡಿತ ದಂಗಾಗಿಬಿಡುತ್ತೀರಿ.. ಪ್ರಕೃತಿಯ ಸುಂದರ ಮಡಿಲಲ್ಲೇ ಮೌನವಾಗಿ ಹೊಂಚು ಹಾಕುತ್ತಿರುತ್ತಾನೆ ಜವರಾಯ. ಯಾವಾಗ ಎಲ್ಲಿ ಹೇಗೆ ಯಮ ದರ್ಶನ ಆಗಿಬಿಡುತ್ತೆ ಅನ್ನೋದೇ ಗೊತ್ತಾಗುವುದಿಲ್ಲ. ಬೆಟ್ಟ ಗುಡ್ಡಗಳ ರಮಣೀಯ ನೋಟ ಕಣ್ತುಂಬಿಕೊಳ್ಳುವಾಗ, ಕರುಣೆಯಿಲ್ಲದೇ ಎರಗುತ್ತಾನೆ ಯಮರಾಯ. ಅಂತಹ ಸಾಕಷ್ಟು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಆದ್ರೆ ಇಲ್ಲಿ ನಡೆದಿರೋ ದುರ್ಘಟನೆಯಲ್ಲಿ ಹಲವರ ಅದೃಷ್ಟ ಚೆನ್ನಾಗಿತ್ತು.

 

ಜಮ್ಮು ಮತ್ತು ಕಾಶ್ಮೀರದ ರಜೌರಿ ಮತ್ತು ಪೂಂಚ್ ನಗರಗಳ ಮಧ್ಯೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಇಂತಹದೊಂದು ಘಟನೆ ನಡೆದಿದೆ. ರಸ್ತೆಯಲ್ಲಿ ಮಣ್ಣು ಕುಸಿದ ಹಿನ್ನೆಲೆ ಕೆಲವೇ ಅಡಿಗಳ ದೂರದಲ್ಲಿ ವಾಹನಗಳು ರಸ್ತೆಯ ಎರಡೂ ಬದಿಯಲ್ಲಿ ನಿಂತಿವೆ. ಇಂತಹ ಸಂದರ್ಭದಲ್ಲಿ ನೋಡ ನೋಡುತ್ತಿದ್ದಂತೆ ಭಾರಿ ಪ್ರಮಾಣದಲ್ಲಿ ಬೆಟ್ಟ ಕುಸಿದು ಬೀಳುವುದು ಗೋಚರಿಸುತ್ತದೆ.

ಇದನ್ನು ಓದಿ: ಕೇವಲ 6 ಗಂಟೆಗಳಲ್ಲೇ 300 ಮಿಮೀ ಪ್ರಳಯಾಂತಕ ಮಳೆ

ಈ ಭೀಕರ ದೃಶ್ಯ ಕಂಡು ವಾಹನದಲ್ಲಿ ಕೂತಿದ್ದವರು ಕೆಳಗಿಳಿದು ಓಡಿ ಬರುತ್ತಾರೆ. ವಾಹನ ಹಿಂದಕ್ಕೆ ಚಲಾಯಿಸುವ ಧೈರ್ಯ ಸಾಲುವುದಿಲ್ಲ. ಆಗ ಮತ್ತೊಬ್ಬ ಸಾರಥಿಯ ಸೀಟನ್ನೇರಿ ವಾಹನವನ್ನು ಹಿಂದಕ್ಕೆ ಚಲಾಯಿಸುವ ದೃಶ್ಯವೂ ಸೆರೆಯಾಗಿದೆ. ಕೇವಲ 20ರಿಂದ 50 ಅಡಿಗಳ ದೂರದಲ್ಲಿ ನಿಂತಿದ್ದ ವಾಹನಗಳು ಯೂಟರ್ನ್ ತೆಗೆದುಕೊಂಡು ವಾಪಸ್ ಹೋಗಲು ಮುಂದಾಗಿವೆ. ಈ ಘಟನೆಯಲ್ಲಿ ವಾಹನ ಚಾಲಕರ ಸಮಯ ಪ್ರಜ್ಞೆಯಿಂದ ಹಲವರು ಜೀವಗಳು ಉಳಿದಂತಾಗಿದೆ.

RELATED ARTICLES

Related Articles

TRENDING ARTICLES