Sunday, October 6, 2024

ಕೇವಲ 6 ಗಂಟೆಗಳಲ್ಲೇ 300 ಮಿಮೀ ಪ್ರಳಯಾಂತಕ ಮಳೆ

ಧೋ.. ಧೋ.. ಧೋ.. ಅಬ್ಬಾ ಏನ್ ಮಳೆ ಅಂತೀರಿ. ಆರು ಗಂಟೆಗೂ ಹೆಚ್ಚು ಕಾಲ ಬಿಟ್ಟುಬಿಡದೇ ಆರ್ಭಟಿಸಿದ ವರುಣ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲೇ ಹೊಳೆಯಂತಾಗಿದ್ದ ರಸ್ತೆಗಳು. ಮನೆಯಿಂದ ಹೊರಗೆ ಹೋಗಲಾರದ ಪರಿಸ್ಥಿತಿ. ವಾಹನ ಸಂಚಾರ ಬಂದ್ ಮಾತ್ರವಲ್ಲ.. ಮಹಾನಗರಿಯ ನರ ನಾಡಿಯಂತಿರುವ ಲೋಕಲ್ ರೈಲುಗಳ ಸಂಚಾರ ಕೂಡ ಹಲವು ಕಡೆಗಳಲ್ಲಿ ಬಂದ್ ಬಂದ್ ಬಂದ್.. ಇದು ವರ್ಷಧಾರೆಗೆ ಬೆಂಡಾಗಿರುವ ಮುಂಬೈ ನಗರಿಯ ಪಾಡು. ಕೆಲವು ಪ್ರದೇಶಗಳಲ್ಲಿ ನೀರು ನಿಂತಿರುವ ಟ್ರ್ಯಾಕ್​​ಗಳಲ್ಲಿ ರೈಲುಗಳು ನಿಧಾನವಾಗಿ ಸಂಚರಿಸುತ್ತಿವೆ.

 ಹೌದು ಕಳೆದ ರಾತ್ರಿ ಎಂದರೆ ಜುಲೈ 7ರ ಭಾನುವಾರದ ರಾತ್ರಿ 12ಯ ಬಳಿಕ ಮಳೆ ಆರ್ಭಟ ಶುರುವಾಗಿತ್ತು. ಮಧ್ಯರಾತ್ರಿ 1 ಗಂಟೆಯಿಂದ ಸತತ ಆರು ಗಂಟೆಗಳ ಕಾಲ ಎಂದರೆ, ಜುಲೈ 8ರ ಬೆಳಗ್ಗೆಯ 7 ಗಂಟೆಯವರೆಗೆ ಭಾರಿ ಮಳೆಯಾಗಿತ್ತು. ಸರಿ ಸುಮಾರು ಆರೇ ಗಂಟೆಗಳಲ್ಲಿ 300 ಮಿ.ಮೀ. ಮಳೆ ಸುರಿದಿತ್ತು. ರಾತ್ರಿಯಿಡೀ ಮಳೆಗೆ ಮುಂಬೈಕರ್​ಗಳು ಹೈರಾಣಾಗಿದ್ದಾರೆ. ಬೆಳಗಾಗೋ ವೇಳೆಗೆ ಅದೆಷ್ಟೋ ಮನೆಗಳಲ್ಲಿ ನೀರು ನುಗ್ಗಿತ್ತು. ರಸ್ತೆಗಳು ಮಳೆಯಲ್ಲಿ ಮಾಯವಾಗಿದ್ದವು. ಸಂಚಾರಕ್ಕೆ ಸಂಕಷ್ಟ ಎದುರಾಗಿತ್ತು. ವೀಕೆಂಡ್ ಕಳೆದು ಸೋಮವಾರ ಎಂದಿನಂತೆ ಕೆಲಸಕ್ಕೆ ಹೊರಡಲು ರೆಡಿಯಾಗಿದ್ದ ಮುಂಬೈಕರ್​​ಗಳು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ: ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಪ್ರವಾಸ

ಮುಂಬೈ ನಗರದ ಅಂಧೇರಿ, ಜುಹೂ, ಚುನಾಭಟ್ಟಿ ಸೇರಿದಂತೆ ಹಲವಾರು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ಅನೇಕ ಕಡೆಗಳಲ್ಲಿ ವಾಹನಗಳು ನೀರಿನಲ್ಲೇ ನಿಂತಿದ್ದು, ಜನರು ಮನೆಯಿಂದ ಹೊರಡುವುದೇ ಹರಸಾಹಸವಾಗಿದೆ. ಇನ್ನೂ ಹಲವು ಕಡೆಗಳಲ್ಲಿ ರಸ್ತೆಗಳಲ್ಲಿ ನೀರು ಸಾಗುವಂತೆ ಮಾಡಲು, ಡ್ರೈನೇಜ್ ವ್ಯವಸ್ಥೆಯ ಸರಿಪಡಿಸುವಿಕೆ ಕಾರ್ಯ ಕೂಡ ನಡೀತಿದೆ. ಪಾಲಿಕೆ ಸಿಬ್ಬಂದಿ ಬೆಳಗ್ಗೆಯಿಂದಲೇ ಬೀದಿಗಿಳಿದು ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ಸಚಿವ ಅನಿಲ್ ಪಾಟೀಲ್ ನಗರದ ಹಲವು ಪ್ರದೇಶಗಳಿಗೆ ಬೆಳಗ್ಗೆಯಿಂದ ನಗರದಲ್ಲಿ ಸಂಚಾರ ಕೈಗೊಂಡಿದ್ದು, ಪರಿಹಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ.

RELATED ARTICLES

Related Articles

TRENDING ARTICLES