Sunday, October 6, 2024

ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಪ್ರವಾಸ

ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಪ್ರವಾಸ ಕೈಗೊಂಡಿದ್ದಾರೆ. ಇಂದು ಮತ್ತು ಮಂಗಳವಾರ ರಷ್ಯಾದಲ್ಲಿ ಹಲವು ಸುತ್ತಿನ ಮಾತುಕತೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬುಧವಾರ ಆಸ್ಟ್ರಿಯಾಕ್ಕೆ ತೆರಳಲಿರುವ ಪ್ರಧಾನಿ, ಗುರುವಾರದವರೆಗೂ ಅಲ್ಲಿರಲಿದ್ದಾರೆ ಎನ್ನಲಾಗಿದೆ..

ಇದನ್ನೂ ಓದಿ: ಕೇರಳದಲ್ಲಿ ಮೆದುಳು ಅಮೀಬಾ ಸೋಂಕು ಹೆಚ್ಚಳ

ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯು ಮೋದಿಯವರ ರಷ್ಯಾ ಭೇಟಿಯ ಪ್ರಮುಖ ಅಜೆಂಡಾವಾಗಿದೆ. ರಷ್ಯಾ-ಉಕ್ರೇನ್ ಸಂಘರ್ಷದ ನಂತರದ ಮೊದಲ ಭೇಟಿಯಲ್ಲಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಈ ವಿಷಯದ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ನರೇಂದ್ರ ಮೋದಿ ಅವರಿಗೆ ಔತಣಕೂಟ ಏರ್ಪಡಿಸಲಿದ್ದಾರೆ. ನಾಳೆ ಶೃಂಗಸಭೆ ನಡೆಯಲಿದ್ದು, ಇದರಲ್ಲಿ ಉಭಯ ನಾಯಕರು ಭಾಗವಹಿಸಲಿದ್ದಾರೆ.

ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಈ ಭೇಟಿ ಸಹಕಾರಿಯಾಗಲಿದೆ. ಪ್ರಧಾನಿಯವರ ರಷ್ಯಾ ಭೇಟಿಯ ಬಗ್ಗೆ ಪಾಶ್ಚಾತ್ಯರು ತುಂಬಾ ಅಸೂಯೆ ಪಟ್ಟಿದ್ದಾರೆ. 22ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿಶೇಷ ಆಹ್ವಾನದ ಮೇರೆಗೆ ಪ್ರಧಾನಿ ಇಂದು ರಷ್ಯಾಕ್ಕೆ ಭೇಟಿ ನೀಡುತ್ತಿದ್ದಾರೆ.

2019ರಲ್ಲಿ ಪ್ರಧಾನಿ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡಿದ್ದರು. ಪೂರ್ವ ರಷ್ಯಾದಲ್ಲಿರುವ ವ್ಲಾದಿವೋಸ್ಟೊಕ್‌ನಲ್ಲಿ ಆರ್ಥಿಕ ಸಮಾವೇಶವೊಂದರಲ್ಲಿ ಪಾಲ್ಗೊಂಡಿದ್ದರು. ಆಧುನಿಕ ಡಿಜಿಟಲ್‌ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಭಾರತ ಭಯೋತ್ಪಾದನೆ ಮತ್ತು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಬದ್ಧವಾಗಿದೆ. ಈ ಬಗ್ಗೆ ತನ್ನ ಸಹೋದರ ರಾಷ್ಟ್ರಗಳ ಸಹಕಾರದಲ್ಲಿ ಮುನ್ನಡೆಯುವುದಾಗಿ ಭಾರತದ ರಾಜತಾಂತ್ರಿಕ ನಿಯೋಗ ಬ್ರಿಕ್ಸ್‌ ಶೃಂಗದಲ್ಲಿ ಒತ್ತಿ ಹೇಳಿದೆ.

RELATED ARTICLES

Related Articles

TRENDING ARTICLES