Sunday, October 6, 2024

ಕಾಣೆಯಾಗಿದ್ದ ಯುವತಿ ಶವವಾಗಿ ಪತ್ತೆ: ಸ್ನೇಹಿತನಿಂದಲೇ ಕೊಲೆ

ಶಿವಮೊಗ್ಗ: ಜೂನ್​ 30 ರಂದು ಮನೆಯಿಂದ ಕಾಣೆಯಾಗಿದ್ದ ಯುವತಿ ಶವವಾಗಿ ಪತ್ತೆಯಾಗಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪೂಜಾ ಎ.ಕೆ (24) ಮೃತ ಯುವತಿ, ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿಯಾಗಿದ್ದ ಪೂಜಾ. ಜೂನ್​.30 ರಂದು ಮನೆಯಿಂದ ಕೆಲಸಕ್ಕೆಂದು ಹೋಗಿ ಮತ್ತೆ ವಾಪಾಸ್​ ಆಗಿರಲಿಲ್ಲ, ಇದರಿಂದ ಗಾಬರಿಗೊಂಡ ಯುವತಿಯ ತಂದೆ ಕುಶಾಲ್​ ಆಗುಂಬೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ: ಬೆಳ್ಳಂ ಬೆಳಗ್ಗೆ ಬಾಯ್ಲರ್​ ಸ್ಪೋಟ: ಕೂದಲೆಳೆ ಅಂತರದಲ್ಲಿ ಕಾರ್ಮಿಕರು ಪಾರು

ಪ್ರಕರಣದ ವಿಚಾರಣೆ ಕೈಗೊಂಡ ಪೊಲೀಸರು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದೂ, ಪೂಜಾ ಕೊಲೆಗೆ ಆಕೆಯ ಸ್ನೇಹಿತ ಮಣಿಕಂಠನೇ ಕಾರಣ ಎಂಬ ಸತ್ಯವನ್ನು ಬೇದಿಸಿದ್ದಾರೆ. ಈ ಕೊಲೆ ಮಾಡಿದ್ದು ತಾನೆ ಎಂದು ಆರೋಪಿ ಮಣಿಕಂಠ ಒಪ್ಪಿಕೊಂಡಿದ್ದಾನೆ. ಘಟನೆ ಸಂಬಧ ಆಗುಂಬೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES

Related Articles

TRENDING ARTICLES