Saturday, October 5, 2024

ಸಮಸ್ಯೆ ಬಗೆಹರಿಸಲು ಶಾಸಕರು -ಅಧಿಕಾರಿಗಳಿದ್ದಾರೆ : HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

ಮಂಡ್ಯ: ಜನತಾ ದರ್ಶನಕ್ಕೆ ಅಧಿಕಾರಿಗಳನ್ನು ನಿರ್ಬಂಧಿಸಿ ಸರ್ಕಾರ ಸಣ್ಣತನ ತೋರಿದೆ ಎಂಬ ಕೇಂದ್ರ ಸಚಿವ ಹೆಚ್​,ಡಿ ಕುಮಾರಸ್ವಾಮಿ ಆರೋಪಕ್ಕೆ ರಾಜ್ಯ ಕೃಷಿ ಸಚಿವ ಹಾಗು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್​. ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಮಂಡ್ಯದಲ್ಲಿ ಮಾದ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಒಬ್ಬರದ್ದೇ ದೊಡ್ಡತನ, ಮಿಕ್ಕವರೆಲ್ಲಾ ಸಣ್ಣವರು, ಅವರು ಮೊದಲ ಬಾರಿ ಸಂಸದರಾಗಿಲ್ಲ. ಅವರಿಗೆ ತುಂಬಾ ಅನುಭವ ಇದೆ ಎಂದು ಭಾವಿಸಿದ್ದೇನೆ. ಯಾರಿಗೂ ಇಲ್ಲದ ನಿರ್ಬಂಧ ಇವರಿಗೆ ಮಾಡಿಲ್ಲ. ಪ್ರಜಾಪ್ರಭುತ್ವದಲ್ಲಿ ಯಾರ್ಯಾರಿಗೆ ಏನೇನು ವ್ಯಾಪ್ತಿ ಅವರಿಗೂ ಗೊತ್ತಿದೆ. ಅವರು ಎರಡು ಬಾರಿ ಸಿಎಂ ಆಗಿದ್ದಾಗ ಇದ್ದ ಆದೇಶ ಈಗಲೂ ಇದೆ ಅಷ್ಟೇ ಎಂದು ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.

ಚಿತ್ರದುರ್ಗ MP ನಾರಾಯಣಸ್ವಾಮಿ ಹೀಗೆ ಮಾಡಲು ಹೊರಟಾಗ ಮಾಡಿದ್ದ ಸುತ್ತೋಲೆ ಈಗಲೂ ಹೊರಡಿಸಲಾಗಿದೆ ಅಷ್ಟೇ. ಕೇಂದ್ರ ಸರ್ಕಾರ ಹಲವು ತೀರ್ಮಾನಗಳನ್ನ ರಾಜ್ಯ ಸರ್ಕಾರ ತಿರಸ್ಕರಿಸಿದ ಉದಾಹರಣೆ ಇದೆ. ಮೋದಿ ಅವರ ಜೊತೆ ಹೆಚ್‌ಡಿಕೆಗೆ ಉತ್ತಮ ಭಾಂದವ್ಯ ಹೊಂದಿದ್ದಾರೆ. ದೇಶ ಗಮನಿಸಿಕೊಳ್ಳಲು ಮೋದಿ ಇವ್ರನ್ನ ಮಂತ್ರಿ ಮಾಡಿದ್ದಾರೆ. ಜನತಾದರ್ಶನ ನಡೆಸಿ ಸ್ಥಳೀಯರ ಸಮಸ್ಯೆ ಬಗೆಹರಿಸಲು ಶಾಸಕರು, ಅಧಿಕಾರಿಗಳು ಇದ್ದಾರೆ. ಕ್ಯಾಬಿನೆಟ್‌ನಲ್ಲಿ ಹೆಚ್ಡಿಕೆ ಜನತಾದರ್ಶನ ಬಗ್ಗೆ ಒಂದೇ ಒಂದು ಮಾತು ಚರ್ಚೆ ಆಗಿಲ್ಲ.
ಹೆಚ್‌ಡಿಕೆ ಮಂಡ್ಯದ ಎಲ್ಲಾ ತಾಲೂಕುಗಳಿಗೆ ವಿಶೇಷ ಅನುದಾನ ಕೊಡಿಸಲಿ. ಕೈಗಾರಿಕೆಗಳನ್ನ ತಂದು ಜಿಲ್ಲೆ ಅಭಿವೃದ್ಧಿ ಮಾಡಲಿ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲಿ ಎಂದರು.

ಇದನ್ನೂ ಓದಿ: ಡೆಂಗ್ಯೂ ಜ್ವರಕ್ಕೆ ನಿಖರವಾದ ಚಿಕಿತ್ಸೆ ಇಲ್ಲ: ಸಂಸದ ಸಿ.ಎನ್​ ಡಾ.ಮಂಜುನಾಥ್​

ದಿಶಾ ಸಭೆಯಲ್ಲಿ ಕೇಂದ್ರದ ಯೋಜನೆಗಳ ಅನುಷ್ಠಾನ ಕುರಿತು ಚರ್ಚೆ ಮಾಡಲಿಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿಗೆ ಅಧಿಕಾರ ಇದೆ. ಎಲ್ಲಾ ಅಧಿಕಾರಿಗಳನ್ನ ಕೂರಿಸಿಕೊಂಡು ಜನತಾದರ್ಶನ ಮಾಡಲಿಕ್ಕೆ ಅಧಿಕಾರ ಇಲ್ಲ. ಜನರ ಅಹವಾಲು ಸ್ವೀಕರಿಸಿ ಡಿಸಿಗೆ ತಲುಪಿಸಬಹುದು ಅಷ್ಟೇ. ಅನಧಿಕೃತವಾಗಿ ಡಿ.ಕೆ.ಸುರೇಶ್ ಈ ಕಾರ್ಯಕ್ರಮ ಮಾಡಿದ್ದರೂ ತಪ್ಪೇ ಯಾರು ಮಾಡಿದರು ತಪ್ಪೇ ಎಂದು ಅವರು ಹೇಳಿದರು.

ಮೈಸೂರು ‌ಮೂಡಾ ಪ್ರಕರಣ ಬಹಿರಂಗ ಹಿಂದೆ ಡಿಕೆಶಿ ಕೈವಾಡ ಎಂಬ ಹೆಚ್‌ಡಿಕೆ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ತಮ್ಮ ಬೆನ್ನನ್ನ ತಿರುಗಿ ನೋಡಿಕೊಳ್ಳಬೇಕು. ಮಂಡ್ಯ ಲೋಕಸಭಾ ಸದಸ್ಯರಾದ ಮೇಲೆ ಗೌರವಾನ್ವಿತವಾಗಿ ನಡೆದುಕೊಳ್ಳುತ್ತಿದ್ದೇನೆ. ರಾಜ್ಯಕ್ಕೆ ಒಳ್ಳೆಯದಾಗುವ ರೀತಿ ಕೆಲಸ ಮಾಡಬೇಕು. ಬಿಜೆಪಿ ಸರ್ಕಾರದಲ್ಲಿ ಒಂದಷ್ಟು ಗೋಲ್ ಮಾಲ್ ನಡೆದಿದೆ. ಬಿಜೆಪಿ ಸರ್ಕಾರವೇ ಜಾಗ ಕೊಟ್ಟಿರುವುದು. ಸಿಎಂ ಹೆಸರು ಬಂದರೆ ಕೇಸ್ ಮುಚ್ಚೋಗುತ್ತದೆ ಎಂದು ಹೀಗೆ ಮಾಡಲಾಗ್ತಿದೆ ಅಷ್ಟೆ. ಡಿಕೆಶಿಗೆ ಈ ರೀತಿ ಸಂಚು ಮಾಡಿ ಸಿಎಂ ಆಗುವ ಅವಶ್ಯಕತೆ ಇಲ್ಲ ಎಂದರು.

ಜನತಾದರ್ಶನಕ್ಕೆ ಹೆಚ್ಚು ಜನ ಸೇರಿದ್ರು ಎಂಬ ವಿಚಾರಕ್ಕೆ ಉತ್ತರ ನೀಡಿದ ಅವರು, ಲಾರಿಯಲ್ಲೋ, ಇಲ್ಲಾ ಟ್ರಾಕ್ಟರ್‌ನಲ್ಲೋ ಕರೆದುಕೊಂಡು ಬಂದರೋ ಗೊತ್ತಿಲ್ಲ. ಅವರ ಮೇಲಿನ ಪ್ರೀತಿಯಿಂದಲೇ ಬಂದರು ಅಂತಾ ತಿಳಿದುಕೊಳ್ಳೋಣ, ಅವರಷ್ಟು ಬುದ್ದಿವಂತಾ ನಾನಲ್ಲ. ಜನರು ಅವರಿಗೆ ಏನೇನು ಅಹವಾಲು, ಸಮಸ್ಯೆ ಬಗ್ಗೆ ಅರ್ಜಿ ಕೊಟ್ಟಿದ್ದಾರೆ ನೋಡೋಣ. ಆ ಬಳಿಕ ನಿಮ್ಮೊಂದಿಗೆ ಮತ್ತೆ ಈ ವಿಚಾರ ಮಾತನಾಡುತ್ತೇನೆ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES