Saturday, October 5, 2024

ಪ್ರತಿ 3 ನಿಮಿಷಕ್ಕೊಂದು ಮೆಟ್ರೋ: ರೈಲುಗಳ ಸಂಖ್ಯೆ 9ರಿಂದ 15ಕ್ಕೆ ಏರಿಕೆ

ನಮ್ಮ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಮೆಜೆಸ್ಟಿಕ್‌ನಿಂದ ಕಾರ್ಯಾಚರಣೆ ಮಾಡುವ ಮೆಟ್ರೋ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮ, ನೇರಳೆ ಮಾರ್ಗದಲ್ಲಿ ದಟ್ಟಣೆ ಅವಧಿಯಲ್ಲಿ ಪ್ರತಿ 5 ನಿಮಿಷದ ಬದಲಿಗೆ ಪ್ರತಿ 3.30 ನಿಮಿಷಕ್ಕೊಂದು ರೈಲು ಸೇವೆ ಒದಗಿಸಲು ನಿರ್ಧರಿಸಿದೆ.

ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಪ್ರಸ್ತುತ 9 ರೈಲುಗಳನ್ನು ಶಾರ್ಟ್ ಲೂಪ್ ಆಗಿ ಕಾರ್ಯಾಚರಣೆಗೊಳಿಸಲಾಗುತ್ತಿದೆ. ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ಈ ರೈಲುಗಳ ಸಂಖ್ಯೆಯನ್ನು 15ಕ್ಕೆ ಹೆಚ್ಚಿಸಲಾಗಿದೆ. ಈ 15 ರೈಲುಗಳ ಪೈಕಿ ಮೆಜೆಸ್ಟಿಕ್‌ನಿಂದ ಪಟ್ಟಂದೂರು ಅಗ್ರಹಾರವರೆಗೆ 10 ರೈಲುಗಳು, ವೈಟ್‌ಫೀಲ್ಡ್‌ವರೆಗೆ 4 ಹಾಗೂ ಬೈಯಪ್ಪನಹಳ್ಳಿ ನಿಲ್ದಾಣದವರೆಗೆ 1 ರೈಲು ಕಾರ್ಯಾಚರಣೆ ಮಾಡಲಿವೆ.

ಇದನ್ನು ಓದಿ; ಡೆಂಘೀ ಟೆಸ್ಟಿಂಗ್‌ ಬೆಲೆ ಹೆಚ್ಚಳ ಕಂಡು ಬಂದರೆ ಲೈಸನ್ಸ್‌ ರದ್ದು

ಇದರ ಜೊತೆಗೆ ನಿಯಮಿತವಾಗಿ ಸಂಚರಿಸುವ ಮೆಟ್ರೋ ರೈಲುಗಳು ಪೀಕ್ ಅವರ್‌ನಲ್ಲಿ 3.3 ನಿಮಿಷಗಳ ಅಂತರದಲ್ಲಿ ಸೇವೆ ನೀಡಲಿವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಇದಲ್ಲದೆ, ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ಪ್ರಸ್ತುತ ಗರುಡಾಚಾರ್‌ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಕೊನೆಗೊಳ್ಳುತ್ತಿರುವ 14 ರೈಲುಗಳ ಪೈಕಿ 6 ರೈಲುಗಳನ್ನು ವಿಸ್ತರಿಸಲಾಗಿದೆ. ಇನ್ನು ಗರುಡಾಚಾರ್‌ಪಾಳ್ಯ ನಿಲ್ದಾಣದಲ್ಲಿ ಇಳಿಯುವ ಪ್ರಯಾಣಿಕರಿಗೆ ಐಟಿಪಿಎಲ್ ಕಡೆಗೆ ಪ್ರಯಾಣಿಸಲು 3.5 ನಿಮಿಷಗಳ ಅಂತರದಲ್ಲಿ ರೈಲು ಸೇವೆ ಲಭ್ಯವಿರಲಿದೆ.

ಜೊತೆಗೆ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ನಿಲ್ದಾಣದ ಕಡೆಗೆ ಸಂಜೆ 4.40ರ ಬದಲಿಗೆ 4.20ಕ್ಕೆ ರೈಲುಗಳು ಕಾರ್ಯಾಚರಣೆ ಮಾಡಲಿದ್ದು ಪ್ರತಿ ಐದು ನಿಮಿಷಗಳ ಅಂತರದಲ್ಲಿ ಈ ಸೇವೆ ಇರಲಿದೆ. ಹಸಿರು ಮಾರ್ಗದಲ್ಲಿ ಮಾತ್ರ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನಿಗಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

RELATED ARTICLES

Related Articles

TRENDING ARTICLES