Saturday, October 5, 2024

ಡೆಂಘೀ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹೊಸ ಪ್ಲ್ಯಾನ್​​​​

ಬೆಂಗಳೂರು: ಡೆಂಘೀ ನಿಯಂತ್ರಣಕ್ಕೆ ರಾಜ್ಯ ಸರ್ಕಾರಮುಂದಾಗಿದ್ದು, ಒಂದು ಹೊಸ ಪ್ಲ್ಯಾನ್​​​​ ಕೂಡ ಮಾಡಿಕೊಂಡಿದೆ. ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿರುವ ಡೆಂಘೀ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿ ಸಲು ಸ್ಥಳೀಯ ನಗರ ಸಂಸ್ಥೆಗಳಲ್ಲಿ ಸಿವಿಕ್ ಬೈಲಾವನ್ನು ಜಾರಿಗೊಳಿಸಿ ಕಟ್ಟುನಿಟ್ಟಾಗಿ ಅನುಷ್ಠಾನ ಗೊಳಿಸುವುದು ಒಂದೇ ಪರಿಹಾರ ತೀರ್ಮಾನಕ್ಕೆ ಸರಕಾರ ಬಂದಿದೆ.

ಇದನ್ನು ಓದಿ; ಶ್ರೀಘ್ರದಲ್ಲೇ ರಸ್ತೆಗೆ ಇಳಿಯಲಿದೆ KSRTCಯ ಹೊಸ ವೋಲ್ವೋ ಬಸ್​

ಪ್ರಸ್ತುತ ಎಷ್ಟು ನಗರ ಪಾಲಿಕೆಗಳು ಸಿವಿಕ್ ಬೈಲಾ ಅನುಷ್ಠಾನಗೊಳಿಸಿ, ಕಟ್ಟು ನಿಟ್ಟಾಗಿ ತೆಗೆದುಕೊಳ್ಳುತ್ತಿದೆ ಎನ್ನುವುದೇ ಕ್ರಮ ಎಂಬುದೇ ಒಂದು ದೊಡ್ಡ ಪ್ರಶ್ನೆಯಾಗಿದೆ. ಪ್ರಸ್ತುತ ಬೆಂಗಳೂರು ಹಾಗೂ ಮಂಗಳೂರು ಮಾತ್ರ ನಿಂತ ನೀರನ್ನು ತೆರವು ಗೊಳಿಸಲು ಭೂಮಾಲಕರನ್ನು ಹೊಣೆ ಗಾರರನ್ನಾಗಿ ಜಾರಿಗೊಳಿಸಿದೆ.

ಇನ್ನು BBMPಯಲ್ಲಿ ಪ್ರಸ್ತುತ ಮೊದಲ ದಿನ ಎಚ್ಚರಿಕೆ ಹಾಗೂ 50 ರೂ., ತದನಂತರ ದಿನವೊಂದಕ್ಕೆ 15 ರೂ. ನಂತೆ ದಂಡ ವಿಧಿಸಲಾಗುತ್ತಿದೆ. ಈ ದಂಡದ ಮೊತ್ತವನ್ನು BBMP 500 ರೂ.ಗೆ ಹೆಚ್ಚಿಸುವ ಪ್ರಸ್ತಾವನೆಯೂ ಇದೆ. ಈ ರೀತಿ ನಗರಾಡಳಿತದಲ್ಲಿ ಕಟ್ಟು ನಿಟ್ಟಿನ ಕ್ರಮ ಜಾರಿಗೆ ತಂದರೆ ಡೆಂಘೀ ನಿಯಂತ್ರಿಸಬಹುದಾಗಿದೆ. ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿಯು 2017ರಲ್ಲಿ ಎಲ್ಲ ನಗರ ಪಾಲಿಕೆಯಲ್ಲಿ ಸಿವಿಕ್ ಬೈಲಾ ಆಳವಡಿಕೆ ಮಾಡುವಂತೆ ಶಿಫಾರಸು ಮಾಡಿತ್ತು. ಸರಕಾರವೂ ಸಹ ನಗರ ಸ್ಥಳೀ ಯಾಡಳಿತದಲ್ಲಿ ಬೈಲಾ ಅಳವಡಿಸಿ ಕೊಳ್ಳಲು ಸೂಚಿಸಿದೆ..

ಪ್ರತಿಯೊಂದು ಸ್ಥಳೀಯಾಡಳಿತದಲ್ಲಿ ಸಾಂಕ್ರಾಮಿಕ ರೋಗಗಳ ತಡೆಗೆ ಸಿವಿಕ್ ಬೈಲಾ ಅಳವಡಿಸಿದರೆ ಡೆಂಘೀ, ಮಲೇರಿಯಾ, ಕಾಲರಾ, ಚಿಕನ್‌ಗುನ್ಯ ಸೇರಿದಂತೆ ಇತರ ಸಾಂಕ್ರಾ ಮಿಕ ರೋಗಗಳನ್ನು ನಿಯಂತ್ರಣ ಮಾಡಬಹುದು. ರಾಜ್ಯದ ನಗರ ಪಾಲಿಕೆ, ನಗರಸಭೆ, ಕಟ್ಟಡಗಳು ನಿರ್ಮಾಣ, ಪಟ್ಟಣ ಪಂಚಾಯತ್‌ನ ಮನೆ, ವಾಣಿಜ್ಯ ಕಟ್ಟಡ ಆವರಣ,
ಸ್ಥಳಗಳಲ್ಲಿ ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ಅಂಶಗಳು ಕಂಡು ಬಂದರೆ ಆ ಜಾಗದ ಮಾಲಕರಿಗೆ ಎಚ್ಚರಿಕೆಯ ಜೊತೆಗೆ ಸ್ಥಳದಲ್ಲಿಯೇ ದಂಡ ವಿಧಿಸಬಹುದಾಗಿದೆ. ಇನ್ನು ಇದರಿಂದ ಡೆಂಘೀ ಪ್ರಕರಣಗಳನ್ನು ನಿಯಂತ್ರಿಸ ಬಹುದಾಗಿದೆ ಎಂದು ಆರೋಗ್ಯ ಇಲಾಖೆ ಈ ಪ್ರಯತ್ನಕ್ಕೆ ಕೈ ಹಾಕಿದೆ…

RELATED ARTICLES

Related Articles

TRENDING ARTICLES