Saturday, October 5, 2024

ಡೆಂಘೀ ಟೆಸ್ಟಿಂಗ್‌ ಬೆಲೆ ಹೆಚ್ಚಳ ಕಂಡು ಬಂದರೆ ಲೈಸನ್ಸ್‌ ರದ್ದು

ಮಂಗಳೂರು; ಡೆಂಘೀ ಪ್ರಕರಣಗಳಲ್ಲಿ ಸೂಕ್ತ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ. ಡೆಂಘೀ ಟೆಸ್ಟಿಂಗ್‌ಗೆ ಬೆಲೆ ಹೆಚ್ಚಳ ಕಂಡುಬಂದರೆ ಖಾಸಗಿ ಆಸ್ಪತ್ರೆಗಳ ವಿರುದ್ಧ ಪರವಾನಗಿ ರದ್ಧತಿಯಂತಹ ಬಿಗು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಲಾರ್ವಾ ಉತ್ಪತ್ತಿ ಸ್ಥಳಗಳಲ್ಲಿ ನಿಯಂತ್ರಣ ಮಾಡುವುದು ಮೊದಲ ಕೆಲಸವಾಗಬೇಕು. ಸಂಗ್ರಹವಾದ ನೀರಲ್ಲಿ ಸೊಳ್ಳೆ ಉತ್ಪತ್ತಿ ಆಗುತ್ತದೆ, ಅದನ್ನು ನಿಯಂತ್ರಿಸಬೇಕು.

ಇದನ್ನು ಓದಿ; ಸ್ಪೈಸ್ ಜೆಟ್ ಏರ್‌ಲೈನ್ಸ್ ಎಡವಟ್ಟು- ಪ್ರಯಾಣಿಕರು ವಿಮಾನದಲ್ಲೇ ಲಾಕ್

ಈ ವಿಚಾರಗಳನ್ನು ಸಾರ್ವಜನಿಕರು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಮನೆಗಳ ಮುಂದೆ ನೀರು ನಿಲ್ಲುತ್ತದೆ. ಡೆಂಘೀ, ವೈರಲ್ ಜ್ವರ, ಸಾವು ಸಂಭವಿಸದಂತೆ ತಡೆಯಬೇಕು ಎಂದು ಅವರು ಹೇಳಿದರು. ದ.ಕ ಜಿಲ್ಲೆಯಲ್ಲಿ ಹಲವೆಡೆ ಗುಡ್ಡ ಕುಸಿತ ವಿಚಾರ ಪ್ರಸ್ತಾಪಿಸಿದ ಸಚಿವರು, ಮನೆ ಕಟ್ಟಲು ನಾವೇ ಗುಡ್ಡ ಅಗೆಯುತ್ತಿದ್ದೇವೆ.

ಗುಡ್ಡವನ್ನು ಅವೈಜ್ಞಾನಿಕವಾಗಿ ಕತ್ತರಿಸುತ್ತಿದ್ದೇವೆ. ಹಾಗಾಗಿ ಮಳೆ ಬಂದಾಗ ಅದು ಕುಸಿಯುತ್ತದೆ. ಇದು ನಾವೇ ಸೃಷ್ಟಿ ಮಾಡಿಕೊಂಡಿರುವ ಸಮಸ್ಯೆಯಾಗಿದೆ. ತಡೆಗೋಡೆ ಕಟ್ಟುವುದಕ್ಕೆ ದೊಡ್ಡ ಅನುದಾನ ಬೇಕು, ಅದರ ಬಗ್ಗೆ ನೋಡೋಣ ಎಂದವರು ಹೇಳಿದರು.

RELATED ARTICLES

Related Articles

TRENDING ARTICLES