ದೆಹಲಿ ಮೆಟ್ರೋದಲ್ಲಿ ʼRRR’ಚಿತ್ರದ ಜನಪ್ರಿಯ ಹಾಡಾದ “ನಾಚೋ ನಾಚೋ”ಗೆ ಯುವಕನೊಬ್ಬ ಹುಚ್ಚನಂತೆ ಡ್ಯಾನ್ಸ್ ಮಾಡಿ ಹುಚ್ಚಾಟ್ಟ ಮೆರೆದಿದ್ದಾನೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಚಿನ್ ಎಂಬ ವ್ಯಕ್ತಿ ಬ್ಲೂ ಲೈನ್ ದೆಹಲಿ ಮೆಟ್ರೋದಲ್ಲಿ ನಟರಾದ ರಾಮ್ ಚರಣ್ ಮತ್ತು ಜೂನಿಯರ್ NTR ಅವರು ನಟಿಸಿದ ‘RRR’ ಚಿತ್ರದ ಜನಪ್ರಿಯ ಹಾಡಾದ “ನಾಚೋ ನಾಚೋ”ಗೆ ಉತ್ಸಾಹದಿಂದ ಡ್ಯಾನ್ಸ್ ಮಾಡಿದ್ದಾನೆ.
ಈ ವೈರಲ್ ವಿಡಿಯೊದಲ್ಲಿ ಸಚಿನ್ ಮೆಟ್ರೋ ರೈಲಿನಲ್ಲಿ ಮಧ್ಯದಲ್ಲಿ ನಿಂತು ಹಾಡಿಗೆ ಉತ್ಸಾಹದಿಂದ ಭರ್ಜರಿಯಾಗಿ ಡ್ಯಾನ್ಸ್ ಮಾಡುತ್ತಿರುವುದನ್ನು ಮೊದಲು ನಾವು ನೋಡಬಹುದು. ನಂತರ ಇಂದ್ರಪ್ರಸ್ಥ ನಿಲ್ದಾಣದಲ್ಲಿ ಮೆಟ್ರೋ ನಿಂತು ಬಾಗಿಲು ತೆರೆಯುತ್ತಿದ್ದಂತೆ, ಅವನು ಪ್ಲಾಟ್ಫಾರ್ಮ್ನಿಂದ ಹೊರಗೆ ಓಡಿಹೋಗಿ ಕುಳಿದು ಮತ್ತೆ ಬೋಗಿಗೆ ಪ್ರವೇಶಿಸಿ ಡ್ಯಾನ್ಸ್ ಮಾಡುತ್ತಾನೆ. ಇದು ಅವನ ಸ್ನೇಹಿತರು ಮತ್ತು ಸಹ ಪ್ರಯಾಣಿಕರಿಗೆ ಆಶ್ಚರ್ಯ ಮತ್ತು ಮನರಂಜನೆಯನ್ನು ನೀಡುತ್ತದೆ. ಕೆಲವರು ಈ ಡ್ಯಾನ್ಸ್ ನೋಡಿ ಸುಮ್ಮನಿದ್ದರೆ ಕೆಲವರ ಮುಖದಲ್ಲಿ ನಗು ಮೂಡಿದೆ ಎನ್ನಲಾಗಿದೆ.
ಇದನ್ನೂ ಓದಿ: ಕುಮಾರಸ್ವಾಮಿ ಜನತಾ ದರ್ಶನಕ್ಕೆ ಸರ್ಕಾರಿ ಅಧಿಕಾರಿಗಳು ಗೈರು: ಹೆಚ್ಡಿಕೆಗೆ ಇರಿಸುಮುರಿಸು
ಈ ಪೋಸ್ಟ್ ಕೆಲವು ದಿನಗಳ ಹಿಂದೆ ಹಂಚಿಕೊಳ್ಳಲಾಗಿದ್ದು, ಇದಕ್ಕೆ 13.8 ಮಿಲಿಯನ್ ವೀವ್ಸ್ ಹಾಗೂ ಒಂದು ಮಿಲಿಯನ್ ಲೈಕ್ಸ್ ಬಂದಿದೆ. ಸಚಿನ್ ಡ್ಯಾನ್ಸ್ಗೆ ಹಲವು ನೆಟ್ಟಿಜನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
View this post on Instagram