ಬೆಂಗಳೂರು: ಹಿರಿಯ ನಟಿ ದಿ.ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಅವರಿಗೆ ಇಂದು 57ನೇ ಹುಟ್ಟುಹಬ್ಬದ ಸಂಭ್ರಮ, ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಜನ್ಮದಿನ ಆಚರಿಸಿಕೊಂಡಿದ್ದಾರೆ.
ನೆಲಮಂಗಲದ ಸೋಲದೇವನಹಳ್ಳಿಯಲ್ಲಿರುವ ನಟಿ ಲೀಲಾವತಿಯವರ ಮನೆಯಲ್ಲಿ ಇಂದು ನಟ ವಿನೋದ್ ರಾಜ್ ಅವರು ತಮ್ಮ 57ನೇ ಹುಟ್ಟುಬ್ಬವನ್ನು ಆಚರಿಸಿಕೊಂಡಿದ್ದಾರೆ. ತಾಯಿ ಲೀಲಾವತಿಯವರು ಅಗಲಿದ ಬಳಿಕ ಇದೇ ಮೊದಲ ಬಾರಿಗೆ ತಾಯಿ ಅನುಪಸ್ಥಿತಿಯಲ್ಲಿ ಜನ್ಮದಿನ ಆಚರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆ: ಮೈತ್ರಿ ಅಭ್ಯರ್ಥಿ ನಾನೇ- ಸಿ.ಪಿ ಯೋಗೇಶ್ವರ್
ಸೋಲದೇವನಹಳ್ಳಿ ಸುತ್ತಮುತ್ತಲಿನ ಹಳ್ಳಿ ಜನರು ಇಂದು ನಟ ವಿನೋದ್ ರಾಜ್ ಅವರ ನಿವಾಸಕ್ಕೆ ಆಗಮಿಸಿ ಜನ್ಮದಿನದ ಶುಭಾಷಯಗಳನ್ನು ಕೋರಿ ಕೇಕ್ ಕಟ್ ಮಾಡಿಸಿದರು. ಬಳಿಕ ಶಾಲು ಹೂಗುಚ್ಚ ನೀಡಿ ಅಭಿನಂದಿಸಿದರು. ಈ ವೇಳೆ ಅಭಿಮಾನಿಗಳು ಉಪಸ್ಥಿತರಿದ್ದರು.