ಆಷಾಡ ಮಾಸದ ಶುಕ್ಲಪಕ್ಷದ ಪಾಡ್ಯದಿಂದ ನವಮಿಯ ತನಕ 9ದಿನಗಳು ವಾರಾಹಿ ದೇವಿಯನ್ನು ಆರಾಧಿಸುವ ಪದ್ದತಿ ಇದೆ. ಇದನ್ನು ಗುಪ್ತನವರಾತ್ರಿ ಎಂದು ಕರೆಯುತ್ತಾರೆ.
ವಾರಾಹಿ ನವರಾತ್ರಿ ಅಂಗವಾಗಿ ಪ್ರತಿನಿತ್ಯ ದೇವಿಯ ಪೂಜೆ ಮತ್ತು ಹೋಮ ವನ್ನು ಜುಲೈ 5 ರಿಂದ ಜುಲೈ 27ರ ವರೆಗೆ ಶ್ರೀಮಠದಲ್ಲಿ ಆಯೋಜನೆ ಮಾಡಲಾಗಿದೆ. ಇಷ್ಟ ಕಾಮೇಶ್ವರಿ ದೇವಿ ಮತ್ತು ಶ್ರೀಗುರುಸಿದ್ದಲಿಂಗ ದೇವರ ಅಪ್ಪಣೆಯಾಗಿದ್ದು ಅದರಂತೆ ಪೂಜಾ ಕೈಂಕರ್ಯಗಳು, ಹೋಮ ಹವನಗಳು ಜರುಗಲಿದೆ.
ಆಸಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು ಎಂದು ಶ್ರೀಗಳು ಭಕ್ತಾದಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.