Saturday, October 5, 2024

ದರ್ಶನ್‌ಗೆ ಬಿರಿಯಾನಿ ನೀಡಿದ್ದಕ್ಕೆ ಪೊಲೀಸರ ವಿರುದ್ದ ಅಧಿಕಾರಿಗಳು ಗರಂ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ನಟ ದರ್ಶನ್​ ಸೇರಿ 13 ಮಂದಿ ತಂಡಕ್ಕೆ ಬಿರಿಯಾನಿ ನೀಡಿದ್ದಕ್ಕೆ ಪೊಲೀಸರ ವಿರುದ್ಧ ಹಿರಿಯ ಅಧಿಕಾರಿಗಳು ಗರಂ ಆಗಿದ್ದಾರೆ. ಈ ಹಿನ್ನೆಲೆ ಪೊಲೀಸರು ರಾತ್ರಿ ಆರೋಪಿಗಳಿಗೆ ಅನ್ನ ಸಾರು ನೀಡಿದ್ದಾರೆ.

ದರ್ಶನ್ ಅವರು ಜೂನ್ 11ರಂದು ಕೊಲೆ ಆರೋಪದಲ್ಲಿ ಬಂಧಿಸಲಾಗಿತ್ತು. ಅಂದು ರಾತ್ರಿ ದರ್ಶನ್ ಹಾಗೂ ಅವರ ಗ್ಯಾಂಗ್​ಗೆ ಬಿರಿಯಾನಿ ನೀಡಲಾಗಿತ್ತು. ಇದಕ್ಕೆ ಪೂರಕವಾಗಿ ಜೈಲಿನ ಹೊರ ಭಾಗದಲ್ಲಿ ಬಿರಿಯಾನಿ ಬಾಕ್ಸ್ ಕಾಣಿಸಿತ್ತು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

ಈ ಫೋಟೊಗಳು ವೈರಲ್ ಆಗುತ್ತಿದ್ದಂತೆ ಪೊಲೀಸರು ಸಂಕಷ್ಟ ಸಿಲುಕಿದ್ದಾರೆ. ಅಧಿಕಾರಿಗಳ ಎಚ್ಚರಿಕೆಯಿಂದ ಈ  ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.

ಇದನ್ನೂ ಓದಿ: ನಟ ದರ್ಶನ್​, ಪವಿತ್ರಾ ಗೌಡರನ್ನು ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್​ ಆದೇಶ

ದರ್ಶನ್ ಕಿವಿಗೆ ಅಶ್ಲೀಲ ಮೆಸೇಜ್ ವಿಚಾರ ಬೀಳಬಾರದಿತ್ತು:

ಚಿತ್ರದುರ್ಗದ ರೇಣುಕಸ್ವಾಮಿ ಮರ್ಡರ್‌ ಕೇಸ್‌ನಲ್ಲಿ ಕಿಲ್ಲರ್‌ ಸ್ಟಾರ್‌ ದರ್ಶನ್ ಮತ್ತು ಆತನ ಗೆಳತಿ ಪವಿತ್ರಾ ಗೌಡ ಹಾಗೂ ಇತರರು ಅರೆಸ್ಟ್ ಆಗಿ ಇಂದಿಗೆ ಮೂರನೇ ದಿನವಾಗಿದೆ. ಈ ಮಧ್ಯೆ ಪವಿತ್ರಾ ಗೌಡ ಅವರು ಜೈಲಿನಲ್ಲೇ ಕಣ್ಣೀರು ಹಾಸಿದ್ದು ಘಟನೆ ಬಗ್ಗೆ ಪಶ್ಚಾತಾಪ ಪಡುತ್ತಿದ್ದಾರೆ.

ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದ ವಿಚಾರ ದರ್ಶನ್​ ಕಿವಿಗೆ ಬೀಳಬಾರದಿತ್ತು. ನಾನೇ ದೂರು ನೀಡಿ ಸರಿಪಡಿಸಿಕೊಳ್ಳಬೇಕಿತ್ತು. ದರ್ಶನ್​ಗೆ ವಿಚಾರ ಗೊತ್ತಾಗಿ ಇಷ್ಟೆಲ್ಲ ಅನಾಹುತ ನಡೆದುಹೋಯ್ತು ಎಂದು ಪವಿತ್ರಾ ಗೌಡ ಕೊರಗುತ್ತಿದ್ದಾರೆ. ಈ ವಿಚಾರ ನನ್ನಲ್ಲೇ ಇದ್ದಿದ್ದರೆ ಈಗ ಆರಾಮಾಗಿರಬಹುದಿತ್ತು. ಕೊಲೆ ಹಂತಕ್ಕೆ ಯಾರು ಹೋಗುತ್ತಾ ಇರಲಿಲ್ಲ. ಆರೋಪಿಗಳಾಗಿ ನಾವು ಜೈಲು ಸೇರುತ್ತಿರಲಿಲ್ಲ ಎಂದು ಪವಿತ್ರಾ ಗೌಡ ಪಶ್ಚಾತಾಪ ಪಡುತ್ತಿದ್ದಾರೆ.

RELATED ARTICLES

Related Articles

TRENDING ARTICLES