Sunday, October 6, 2024

ಶಕ್ತಿ ಗ್ಯಾರಂಟಿ ಎಫೆಕ್ಟ್: ಬಸ್​ ನಲ್ಲಿ ವಿದ್ಯಾರ್ಥಿಗಳ ಜೀವಕ್ಕಿಲ್ಲ ಗ್ಯಾರಂಟಿ

ಗದಗ: ಶಕ್ತಿ ಯೋಜನೆ ಜಾರಿಯಿಂದಾಗಿ ಸಾರಿಗೆ ಬಸ್​ಗಳು ಫುಲ್​ ರಶ್​  ಆಗುತ್ತಿರೋದು  ಸಾಮಾನ್ಯವಾಗುತ್ತಿದೆ. ಇದರಿಂದಾಗಿ ಸಾಕಷ್ಟು ಕಡೆಗಳಲ್ಲಿ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ಗದಗನಲ್ಲೂ ಇಂಥದ್ದೇ ಪರಿಸ್ಥಿತಿ ಕಂಡುಬಂದಿದ್ದು. ಇಷ್ಟು ದಿನ ಬೇಸಿಗೆ ರಜೆಯ ಕಾರಣ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅಷ್ಟಾಗಿ ಎಫೆಕ್ಟ್​ ತಟ್ಟಿರಲಿಲ್ಲ, ಇದೀಗ ಶೈಕ್ಷಣಿಕ ವರ್ಷ ಮತ್ತೆ ಆರಂಭವಾಗುತ್ತಿರುವ ಬೆನ್ನಲ್ಲೇ ಸಾರಿಗೆ ಬಸ್​ಗಳು ಭರ್ಜರಿಯಾಗಿ ತುಂಬಿ ತುಳುಕುತ್ತಿವೆ. ಇದಕ್ಕೆ ಸರ್ಕಾರದ ಶಕ್ತಿ ಗ್ಯಾರೆಂಟಿ ಯೋಜನೆಗಳೇ ಕಾರಣ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಅಂಜಲಿ ಹತ್ಯೆ ಆರೋಪಿ ಗಿರೀಶ್​ ಕೊನೆಗೂ ಸಿಐಡಿ ವಶಕ್ಕೆ

ಗದಗದಲ್ಲಿ ವಿದ್ಯಾರ್ಥಿಗಳು ಸರ್ಕಸ್‌ ಮಾಡಿಕೊಂಡೇ ಪ್ರಯಾಣಿಸುವ ಸ್ಥಿತಿ ನಿರ್ಮಾಣವಾಗಿದೆ. ಗದಗ ನಗರದ ಹೊರವಲಯದ ಜಿಮ್ಸ್ ಆಸ್ಪತ್ರೆ ಕ್ರಾಸ್‌ನಲ್ಲಿ ಬಸ್‌ನ ಬಾಗಿಗಲ್ಲೇ ಜೋತುಬಿದ್ದು ವಿದ್ಯಾರ್ಥಿಗಳು ಪ್ರಯಾಣಿಸುವ ದೃಶ್ಯ ಕಂಡು ಬಂದಿದೆ. ಒಂದು ಕಾಲು ಫುಟ್‌ ಬೋರ್ಡ್‌ ಮೇಲೆ, ಇನ್ನೊಂದು ಕಾಲು ಜಾಗವಿಲ್ಲದೆ ನೇತಾಡಿಕೊಂಡು ಸಂಚರಿಸ್ತಿದ್ದಾರೆ. ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಅಪಾಯ ಗ್ಯಾರಂಟಿಯಾಗಿದೆ. ಫ್ರೀ ಬಸ್​ ಗ್ಯಾರಂಟಿ ಅವಾಂತರಕ್ಕೆ ಮಕ್ಕಳ ಜೀವಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ ಅನ್ನೋ ಆರೋಪವೂ ಕೇಳಬರುತ್ತಿದೆ.

RELATED ARTICLES

Related Articles

TRENDING ARTICLES