ಬೆಂಗಳೂರು : ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್ ನಾಯಕ ಜಿತೇಶ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಹೈದರಾಬಾದ್ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಐಪಿಎಲ್ನ 69ನೇ ಪಂದ್ಯ ನಡೆಯುತ್ತಿದೆ. ಪಂಜಾಬ್ ವಿರುದ್ಧ ಹೈದರಾಬಾದ್ ಭಾರಿ ಅಂತರದಲ್ಲಿ ಗೆಲುವು ಸಾಧಿಸಿದರೆ RR ಹಿಂದಿಕ್ಕಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ಸಾಧ್ಯತೆಯಿದೆ. ಆದರೆ, ಇಂದಿನ ಪಂದ್ಯದಲ್ಲಿ RR ತಂಡ KKR ವಿರುದ್ಧ ಸೋಲಬೇಕಿದೆ.
ಪಂಜಾಬ್ ಕಿಂಗ್ಸ್ಗೆ ಇದು ಟೂರ್ನಿಯಲ್ಲಿ ಕೊನೆಯ ಪಂದ್ಯವಾಗಿದೆ. ಕಳೆದ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿರುವ ಪಂಜಾಬ್, ಇಂದು ಹೈದರಾಬಾದ್ ತಂಡವನ್ನು ಮಣಿಸಿ ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಲು ಸಜ್ಜಾಗಿದೆ.
ಪಂಜಾಬ್ vs ಹೈದರಾಬಾದ್ ಬಲಾಬಲ
- ಒಟ್ಟು ಪಂದ್ಯ : 22
- ಸನ್ ರೈಸರ್ಸ್ ಹೈದರಾಬಾದ್ : 15 ಗೆಲುವು
- ಪಂಜಾಬ್ ಕಿಂಗ್ಸ್ : 7 ಗೆಲುವು
ರಾಜೀವ್ ಗಾಂಧಿ ಸ್ಟೇಡಿಯಂ (ಹೈದ್ರಾಬಾದ್)
- ಒಟ್ಟು ಪಂದ್ಯ : 8
- ಸನ್ ರೈಸರ್ಸ್ ಹೈದರಾಬಾದ್ : 7 ಗೆಲುವು
- ಪಂಜಾಬ್ ಕಿಂಗ್ಸ್ : 1 ಗೆಲುವು
PCA ಸ್ಟೇಡಿಯಂ (ಮೊಹಾಲಿ)
- ಒಟ್ಟು ಪಂದ್ಯ : 6
- ಸನ್ ರೈಸರ್ಸ್ ಹೈದರಾಬಾದ್ : 4 ಗೆಲುವು
- ಪಂಜಾಬ್ ಕಿಂಗ್ಸ್ : 2 ಗೆಲುವು
ಪಂಜಾಬ್ ಕಿಂಗ್ಸ್
ಪ್ರಭಾಸಿಮ್ರಾನ್ ಸಿಂಗ್, ಅಥರ್ವ ಟೈಡೆ, ರಿಲೀ ರೊಸೊವ್, ಶಶಾಂಕ್ ಸಿಂಗ್, ಜಿತೇಶ್ ಶರ್ಮಾ (ನಾಯಕ/ವಿ.ಕೀ.), ಅಶುತೋಷ್ ಶರ್ಮಾ, ಶಿವಂ ಸಿಂಗ್, ಹರ್ಪ್ರೀತ್ ಬ್ರಾರ್, ರಿಷಿ ಧವನ್, ಹರ್ಷಲ್ ಪಟೇಲ್, ರಾಹುಲ್ ಚಾಹರ್
ಸನ್ರೈಸರ್ಸ್ ಹೈದರಾಬಾದ್
ಅಭಿಷೇಕ್ ಶರ್ಮಾ, ನಿತೀಶ್ ರೆಡ್ಡಿ, ರಾಹುಲ್ ತ್ರಿಪಾಠಿ, ಹೆನ್ರಿಚ್ ಕ್ಲಾಸೆನ್ (ವಿ.ಕೀ.), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಸನ್ವಿರ್ ಸಿಂಗ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ವಿಜಯಕಾಂತ್ ವ್ಯಾಸಕಾಂತ್, ಟಿ. ನಟರಾಜನ್
🚨 Toss Update 🚨
Punjab Kings elect to bat against Sunrisers Hyderabad.
Follow the Match ▶️ https://t.co/K5rcY5Z8FS#TATAIPL | #SRHvPBKS pic.twitter.com/JaIvM6Fwu8
— IndianPremierLeague (@IPL) May 19, 2024