Monday, October 7, 2024

ಪ್ರಜ್ವಲ್​ ರೇವಣ್ಣ ವಿರುದ್ದ ಅರೆಸ್ಟ್​ ವಾರಂಟ್​ ಜಾರಿ

ಹಾಸನ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋಗಳ ಪ್ರಕರಣಕ್ಕೆ ಸಂಬಂಧಿಸಿ ಪ್ರಜ್ವಲ್​ ವಿರುದ್ದ ನ್ಯಾಯಾಲಯ ಅರೆಸ್ಟ್​ ವಾರಂಟ್​ ಜಾರಿ ಮಾಡಿ ಆದೇಶಿಸಿದೆ.

ಅಶ್ಲೀಲ ವೀಡಿಯೋಗಳ ಪ್ರಕರಣಕ್ಕೆ ಸಂಬಂಧಿಸಿ ಪ್ರಜ್ವಲ್​ ರೇವಣ್ಣಗೆ ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ತಂಡ ಹಲವು ಬಾರಿ ನೋಟೀಸ್​ ನೀಡಿದ್ದರು ವಿಚಾರಣೆಗೆ ಹಾಜರಾಗಿಲ್ಲ ಎಂಬ SIT ಮನವಿಯನ್ನು ಪುರಸ್ಕರಿಸಿದ 42ನೇ ಎಸಿಎಂಎಂ ನ್ಯಾಯಾಲಯವು ಅರೆಸ್ಟ್​ ವಾರಂಟ್​ ಜಾರಿಮಾಡಿದೆ.

ಇದನ್ನೂ ಓದಿ: ಪ್ರಜ್ವಲ್​ ರಾಸಲೀಲೆ ವೀಡಿಯೋಗಳ ಪೆನ್​ಡ್ರೈವ್​ ಮಾರಾಟ ಮಾಡಿದ್ದು ದೇವರಾಜೇಗೌಡ: ಶಿವರಾಮೇಗೌಡ

ಈ ಕುರಿತು ವಿವರಣೆ ನೀಡಿರುವ ನ್ಯಾಯಾಲಯವು ವಿದೇಶದಲ್ಲಿರುವ ಆರೋಪಿಯ ವಿರುದ್ದ ಏಕಾಏಕಿ ರೆಡ್​ಕಾರ್ನರ್​ ನೋಟೀಸ್​ ನೀಡಲು ಸಾಧ್ಯವಿಲ್ಲ. ರೆಡ್​ ಕಾರ್ನರ್​ ನೊಟೀಸ್​ ಜಾರಿ ಮಾಡಲು ಚಾರ್ಜ್​​ಶೀಟ್​ ಮುಖ್ಯ, ಆರೋಪಿ ವಿರುದ್ದ ಚಾರ್ಜ್​ಶೀಟ್​ ಸಲ್ಲಿಸಿರಲೇಬೇಕು ಎಂದು ಅಭಿಪ್ರಾಯ ಪಟ್ಟಿದೆ.

ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ನಡೆದ ಮರುದಿನವೇ ಏ.27ರಂದು ಹಾಸನ ಸಂಸದ ಪ್ರಜ್ವಲ್​ ರೇವಣ್ಣ ವಿದೇಶಕ್ಕೆ ಹಾರಿದ್ದರು. ಇವರ ವಿರುದ್ದ ಸಂತ್ರಸ್ಥೆಯರಿಂದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. ಇದೀಗ ನ್ಯಾಯಾಲಯ ನೀಡಿರುವ ವಾರಂಟ್​ ಆದೇಶದ ಹಿನ್ನೆಲೆ ಪ್ರಜ್ವಲ್​ ರೇವಣ್ಣ ವಿದೇಶದಿಂದ ದೇಶಕ್ಕೆ ವಾಪಾಸ್ಸಾಗುತ್ತಿದ್ದಂತೆ ಬಂಧನ ಮಾಡುವ ಸಾಧ್ಯತೆ ಇದೆ.

RELATED ARTICLES

Related Articles

TRENDING ARTICLES