ಬೆಂಗಳೂರು : ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೃಹತ್ ಮೊತ್ ದಾಖಲಿಸಿತು. RCB ಬ್ಯಾಟರ್ಗಳ ಆರ್ಭಟಕ್ಕೆ ಚೆನ್ನೈ ಬೌಲರ್ಗಳು ಬರ್ನ್ ಆದರು.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಿತು. ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 218 ರನ್ ಸಿಡಿಸಿತು.
ಇನ್ನಿಂಗ್ಸ್ ಆರಂಭಿಸಿದ ಆರ್ಸಿಬಿಗೆ ರನ್ ಮಷಿನ್ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ ಅಧ್ಬುತ ಆರಂಭ ನೀಡಿದರು. ವಿರಾಟ್ ಕೊಹ್ಲಿ 47 ರನ್ ಗಳಿಸಿ 3 ರನ್ನಿಂದ ಅರ್ಧಶತಕ ವಂಚಿತರಾದರು. ಫಾಫ್ ಡು ಪ್ಲೆಸಿಸ್ 54 ರನ್ ಸಿಡಿಸಿ ಔಟಾದರು.
ಬಳಿಕ ಬಂದ ರಜತ್ ಪಾಟೀದಾರ್ ಚೆನ್ನೈ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. 23 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 2 ಬೌಂಡರಿಗಳೊಂದಿಗೆ 41 ರನ್ ಚಚ್ಚಿ, ಔಟಾದರು. ಕ್ಯಾಮೆರಾನ್ ಗ್ರೀನ್ ಅಜೇಯ 38, ಮ್ಯಾಕ್ಸ್ವೆಲ್ 16 ಹಾಗೂ ದಿನೇಶ್ ಕಾರ್ತಿಕ್ 14 ರನ್ ಗಳಿಸಿದರು.
ಚೆನ್ನೈ ಪರ ಶಾರ್ದೂಲ್ ಠಾಕೂರ್ 2, ತುಷಾರ್ ದೇಶಪಾಂಡೆ ಹಾಗೂ ಮಿಚೆಲ್ ಸ್ಯಾಂಟ್ನರ್ ತಲಾ 1 ವಿಕೆಟ್ ಪಡೆದರು. ಚೆನ್ನೈ ಗೆಲ್ಲಲು 219 ರನ್ ಗಳಿಸಬೇಕಿದೆ. ಉಭಯ ತಂಡಗಳಿಗೂ ಇದು ‘ಮಾಡು ಇಲ್ಲವೇ ಮಡಿ’ ಪಂದ್ಯವಾಗಿದೆ. ಇಂದು ಆರ್ಸಿಬಿ ಗೆದ್ದರೆ ಪ್ಲೇಆಫ್ಗೆ ಅರ್ಹತೆ ಪಡೆಯಲಿದೆ.
𝘾𝙇𝙐𝘽𝘽𝙀𝘿!
Rajat Patidar departs not before scoring a quick-fire 41 off just 23 👏👏
Watch the match LIVE on @JioCinema and @StarSportsIndia 💻📱#TATAIPL | #RCBvCSK pic.twitter.com/wlrEQSWIMs
— IndianPremierLeague (@IPL) May 18, 2024